Friday, November 22, 2024

ಮಾಜಿ ಶಾಸಕ ಗೌರಿಶಂಕರ್ ನನ್ನನ್ನ ಭೇಟಿ ಮಾಡಿದ್ರು : ಡಾ.ಜಿ. ಪರಮೇಶ್ವರ್

ತುಮಕೂರು : ಜೆಡಿಎಸ್ ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನ ಗೌರಿಶಂಕರ್ ಭೇಟಿ ಮಾಡಿದ್ರು. ನನ್ನ ಆರೋಗ್ಯ ವಿಚಾರಿಸಿ ಚೆನ್ನಾಗಿದ್ದೀರಾ ಅಣ್ಣ ಅಂತ ಮಾತನಾಡ್ಸಿ ಹೋದ್ರು. ನನ್ನ ಬಳಿ ರಾಜಕೀಯ ಚರ್ಚೆ ಮಾಡಿಲ್ಲ. ಹಾರ, ಹಣ್ಣು ಕೊಟ್ರು ಒಳ್ಳೆಯದಾಗಲಿ ಅಂತ ಹೇಳಿದ್ರು. ರಾಜಕೀಯ ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ.

ಲೋಕಾಸಭಾ ಚುನಾವಣೆಗೆ ಜಿಲ್ಲೆಗೆ ಉಸ್ತುವಾರಿ ನೇಮಕ ವಿಚಾರ ಕುರಿತು ಮಾತನಾಡಿ, ನಮ್ಮ ಪಕ್ಷದಿಂದ ಪ್ರತಿಯೊಬ್ಬ ಸಚಿವರನ್ನು ಲೋಕಾಸಭಾ ಚುನಾವಣೆಗೆ ಉಸ್ತುವಾರಿ ವಹಿಸಿದ್ದಾರೆ. ನನಗೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹಾಕಿದ್ದಾರೆ. ತುಮಕೂರು ಇರುತ್ತೆ ಅದರ ಜೊತೆಗೆ ಮತ್ತೊಂದು ಕ್ಷೇತ್ರ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಅವರು ಬಂದ್ ಮಾಡೇ ಮಾಡ್ತಾರೆ

ನಾಳೆ ಬೆಂಗಳೂರು ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಪೊಲೀಸ್ ಇಲಾಖೆ ವತಿಯಿಂದ ಕಾನೂನು ರಕ್ಷಣೆ ಮಾಡೋದಿಕ್ಕೆ ಏನು ಮಾಡಬೇಕು ಅದನ್ನೆಲ್ಲಾ ನಮ್ಮ ಇಲಾಖೆಯವರು ಮಾಡಿಕೊಂಡಿದ್ದಾರೆ. ನಾನು ಅವರಿಗೆ ಮನವಿ ಮಾಡೋದು ಇಷ್ಟೇ. ಒಂದು ಬಂದ್ ಮಾಡಬೇಡಿ ಅಂತ ಹೇಳ್ತಿವಿ. ಆದರೆ, ಅವರು ಮಾಡೇ ಮಾಡ್ತಾರೆ. ಆದರೂ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯಬಾರದು ಎಂದು ತಿಳಿಸಿದ್ದಾರೆ.

ಕಾನೂನು ಕ್ರಮ ತಗೊಂಡೆ ತಗೊಳ್ತಿವಿ

ಸಾರ್ವಜನಿಕರ ಆಸ್ತಿಗೆ ಹಾನಿಯಾಗಬಾರದು. ಸರ್ಕಾರಿ ಆಸ್ತಿಗಳ ನಷ್ಟ ಆಗಬಾರದು ಕಾನೂನು ಬಾಹಿರವಾದಂತಹ ಯಾವುದೇ ಚಟುವಟಿಕೆಗಳು ನಡೆಯಬಾರದು. ನಾನು ಅವರಲ್ಲಿ ಮನವಿ ಮಾಡ್ತೆನೆ. ಒಂದು ವೇಳೆ ಆ ರೀತಿ ಆಗೋದಾದ್ರೆ ಕಾನೂನು ಕ್ರಮ ತಗೊಂಡೆ ತಗೊಳ್ತಿವಿ. ಈಗಾಗಲೇ ಪೊಲೀಸ್ ಇಲಾಖೆ ಅವರು ಎಲ್ಲಾ ತಯಾರಿಯನ್ನ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES