Monday, December 23, 2024

ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ವೆಡ್ಸ್​​ ರಾಘವ್ ಚಡ್ಡಾ

ಉದಯ್​ಪುರ್​: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಪ್ ನಾಯಕ್ ರಾಘವ್ ಚಡ್ಡಾ ಮದುವೆ ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ಈ ಮದುವೆ ನಡೆದಿದೆ. ನಿನ್ನೆ ಸಂಜೆ ವೇಳೆಗೆ ಇಬ್ಬರೂ ಮದುವೆ ಆಗಿದ್ದಾರೆ. ಈ ಮದುವೆಗೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಆದರೆ, ಕೆಲವರು ಪ್ರಮುಖರು ಮದುವೆಗೆ ಗೈರಾಗಿದ್ದಾರೆ. ಇದು ದಂಪತಿಯ ಬೇಸರಕ್ಕೆ ಕಾರಣ ಆಗಿದೆ.

ಇದನ್ನೂ ಓದಿ : ಬಿಬಿಎಂಪಿ ಕಸದ ಲಾರಿಗೆ ಬೈಕ್ ಡಿಕ್ಕಿ; ಓರ್ವ ಸಾವು

ಲೀಲ್ಯಾ ಪ್ಯಾಲೇಸ್​ನ ಸರೋವರದ ಮಧ್ಯೆ ಮದುವೆ ಮಂಟಪ ಸಿದ್ದಪಡಿಸಲಾಗಿತ್ತು. ಬೋಟ್ ಮೂಲಕ ಈ ಜೋಡಿ ಮಂಟಪಕ್ಕೆ ತೆರಳಿದರು. ಮಧ್ಯಾಹ್ನ 3:30ರ ಸುಮಾರಿಗೆ ಇಬ್ಬರೂ ಮಾಲೆ ಬದಲಾಯಿಸಿಕೊಂಡರು. 4 ಗಂಟೆಗೆ ಈ ಜೋಡಿ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.

RELATED ARTICLES

Related Articles

TRENDING ARTICLES