Sunday, December 22, 2024

ಪ್ರಕಾಶ್​ ರೈ ಹಂದಿ ಇದ್ದಂತೆ, ದರ್ಶನ್​-ಯಶ್​ ಸಿನಿಮಾಗಳನ್ನು ಬಹಿಷ್ಕರಿಸಬೇಕು: ಯತ್ನಾಳ್​ ಆಕ್ರೋಶ

ವಿಜಯಪುರ : ಪ್ರಕಾಶ್​ ರೈ ಹಂದಿ ಇದ್ದಂತೆ, ಯಾವೊಬ್ಬ ನಟನೂ ಕಾವೇರಿ ವಿಚಾರವಾಗಿ ಇದುವರೆಗೂ ಹೋರಾಟ ಮಾಡಿಲ್ಲ ಅವರ ಸಿನಿಮಾ ಬಹಿಷ್ಕರಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕಿಡಿಕಾರಿದರು.

ವಿಜಯಪುರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಹೋರಾಟ ಮಾಡಲು ಇದುವರೆಗೂ ಕನ್ನಡದ ಯಾವೊಬ್ಬ ನಟ ನಟಿಯರೂ ಬಂದಿಲ್ಲ, ಅವರನ್ನೆಲ್ಲಾ ಅವರ ಮನೆಗೆ ಹೋಗಿ ಆರತಿ ಬೆಳಗಿ ಕರೆಯಬೇಕಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕಾವೇರಿ ವಿಚಾರ: ನಾವು ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ: ಡಿಬಾಸ್​ ದರ್ಶನ್​

ಸಿನಿಮಾಗಳನ್ನು ಮಾಡಿ ಹಣಮಾಡಿರುವ ನಟನಟಿಯರು ಜನರ ಪರವಾಗಿ ಹೊರಗೆ ಬಂದು ಹೋರಾಟ ಮಾಡಲಿ, ನಟ ದರ್ಶನ್​, ಯಶ್​ ಎಲ್ಲರೂ ಕಾವೇರಿ ಭಾಗದವರೇ ಆಗಿದ್ದಾರೆ. ಇಲ್ಲಿನ ನಟರೂ ತಾವೇ ಸ್ವಯಂ ಪ್ರೇರಿತರಾಗಿ ಕಾವೇರಿ ಹೋರಾಟಕ್ಕೆ ಮುಂದಾಗಬೇಕು, ಯಾರು ಭಾಗವಹಿಸುವುದಿಲ್ಲವೋ ಅವರ ಸಿನಿಮಾಗಳನ್ನು ಎಲ್ಲರೂ ಬಹಿಷ್ಕರಿಸಬೇಕು ಎಂದರು.

RELATED ARTICLES

Related Articles

TRENDING ARTICLES