Tuesday, December 24, 2024

ಸೆಪ್ಟೆಂಬರ್​ 29 ಕ್ಕೆ ಅಖಂಡ ಕರ್ನಾಟಕ ಬಂದ್​ : ವಾಟಾಳ್​ ನಾಗರಾಜ್​

ಬೆಂಗಳೂರು : ಕಾವೇರಿ ಕಿಚ್ಚು ದಿನದಿಂದ ದಿನಕ್ಕೆ ಏರುತ್ತಲೇ ಈಗಾಗಲೇ ಸೆಪ್ಟೆಂಬರ್​ 26 ರಂದು ಮಂಗಳವಾರ ಬೆಂಗಳೂರು ಬಂದ್​ ನಡೆಸಲು ತೀರ್ಮಾನಿಸುರುವ ಬೆನ್ನಲ್ಲೇ ಸೆ.29 ಕ್ಕೆ ಕರ್ನಾಟಕ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದು ವಾಟಾಳ್​ ನಾಗರಾಜ್​ ತಿಳಿಸಿದ್ದಾರೆ.

ಇದನ್ನೂ ಓದಿ: ಏಷಿಯನ್ ಗೇಮ್ಸ್​ 2023: ಮೊದಲ ದಿನವೇ ಭಾರತದ ಪದಕ ಬೇಟೆ ಆರಂಭ!

ಬೆಂಗಳೂರಿನಲ್ಲಿ ಮಾತನಾಡದ ಅವರು, ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪನ್ನು ವಿರೋಧಿಸಿ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ, ಇದೇ ವೇಳೆ ಸೆಪ್ಟೆಂಬರ್​ 29 ರಂದು ಶುಕ್ರವಾರ ಅಖಂಡ ಕರ್ನಾಟಕ ಬಂದ್​ ಮಾಡಲು ತೀರ್ಮಾನಿಸಿದ್ದೇವೆ.

ಈ ಕುರಿತು ಕನ್ನಡ ಪರ ಹೋರಾಟಗಾರರು ನಾಳೆ ಬೆಳಗ್ಗೆ 10.30ಕ್ಕೆ ಸಭೆಯನ್ನು ಕರೆದಿದ್ದೇವೆ. ಈ ಸಭೆಯಲ್ಲಿ ಅಂತಿಮವಾಗಿ ತೀರ್ಮಾನ ಕೈಗೊಳ್ಳಲಿದ್ದೇವೆ. ಈ ಹೋರಾಟಕ್ಕೆ ರಾಜ್ಯದ ಎಲ್ಲಾ ಕನ್ನಡಪರ ಸಂಘಟನೆಗಳು, ರೈತ ಪರ ಸಂಘಟನೆಗಳು ಬಂದ್​ಗೆ ಸಹಕರಿಸಬೇಕು , ಇಡೀ ರಾಜ್ಯದ ರೈತ ಕುಟುಂಬ ಈ ಬಂದ್​ನಲ್ಲಿ ಭಾಗಿಯಾಗಲಿದೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES