ಉತ್ತರ ಕನ್ನಡ : ಮನೆಯ ಸಮೀಪ ಬೇಲಿಗೆ ಕಟ್ಟಲಾಗಿದ್ದ ಬಲೆಯಲ್ಲಿ ಸಿಲುಕಿದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿದ್ರಳ್ಳಿಯಲ್ಲಿ ನಡೆದಿದೆ.
ಬಿದ್ರಳ್ಳಿಯ ತಿಲಕ ನಾಯ್ಕ ಎನ್ನುವವರ ಮನೆಯ ಸಮೀಪ ಬೇಲಿಗೆ ಕಟ್ಟಲಾಗಿದ್ದ ಬಲೆಯಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಬಲೆಯ ಕಿಂಡಿಯಲ್ಲಿ ಸಿಲುಕಿ ಮುಂದೆ ತೆರಳಲಾದರೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ತಿಲಕ್ ನಾಯ್ಕ ಅವರು ಉಂಚಳ್ಳಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಫಾರೆಸ್ಟ್ ಗಾರ್ಡ್ ಮಂಜುನಾಥ ಹಾಗೂ ವಾಚರ್ ಕೋಟೆಗುಡ್ಡೆ ಮಂಜಣ್ಣ ಸ್ಥಳಕ್ಕೆ ಆಗಮಿಸಿ, ಬಲೆಯನ್ನು ತುಂಡರಿಸಿದರು. ಬಳಿಕ, ಹೆಬ್ಬಾವನ್ನು ಸುರಕ್ಷಿತವಾಗಿ ಹೊರಗೆ ತೆಗೆದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.