Monday, December 23, 2024

ಜೆಡಿಎಸ್-ಬಿಜೆಪಿ ಮೈತ್ರಿ : ಯಡಿಯೂರಪ್ಪ ಕಾಲಿಗೆ ಬಿದ್ದ ನಿಖಿಲ್​!

ಬೆಂಗಳೂರು : ರಾಜಕಾರಣದಿಂದ ನಾನು ಹಿಂದೆ ಸರಿಯುತ್ತೇನೆ ಎಂದು ಎಲ್ಲೂ ಕೂಡು ವಯ್ಯಕ್ತಿಕವಾಗಿ ಪ್ರತಿಕ್ರಿಕೆ ನೀಡಿಲ್ಲ ಎಂದು ನಿಖಿಲ್​ ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ಬಿಜೆಪಿ ಮೈತ್ರಿ ಹಿನ್ನಲೆ ಉಭಯ ಪಕ್ಷಗಳಲ್ಲೂ ರಾಜಕೀಯ ‌ಲೆಕ್ಕಾಚಾರ ಶುರುವಾಗಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರ ನಿವಾಸದಲ್ಲಿಂದು ಭೇಟಿಯಾ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದರು.

ದೇವೇಗೌಡ ಅವರು, ಕುಮಾರಣ್ಣ ನವರು ಜೊತೆಗೆ ಕಾರ್ಯಕರ್ತರು ಸೇರಿ ಯಶಸ್ವಿಯಾಗಿ ಪ್ರಾದೇಶಿಕ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಯುವಕರು ಪಕ್ಷದಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಮುಖಂಡರು ಯಾವ ಜವಾಬ್ದಾರಿಯನ್ನು ನೀಡಿದರು ಅದನ್ನು ನಿಭಾಯಿಸಲು ಸಿದ್ದ ಎಂದರು.

ಇದನ್ನೂ ಓದಿ: ಚಿಕ್ಕ ಮಗುವನ್ನ ಬೇಟೆಯಾಡ್ತಿದ್ದಾರೆ’: ಉಯದನಿಧಿ ಸ್ಟಾಲಿನ್​ ಪರ ನಿಂತ ನಟ ಕಮಲ್​ ಹಾಸನ್​!

ಮುಂದಿನದಿನಗಳಲ್ಲಿ ಜನರ ವಿಶ್ವಾಸವನ್ನುಗಳಿಸಿ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಿಗೆ 28 ಸ್ಥಾನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್​ ಜಂಟಿಯಾಗಿ ಚುನಾವಣೆ ಎದುರಿಸಿ ಗೆಲುವು ಸಾಧಿಸುತ್ತೇವೆ ಎಂದರು.

ಹೈಕಮಾಂಡ್​ ಜೊತೆ ಮೈತ್ರಿ ಮಾತುಕತೆಯಲ್ಲಿ ರೇವಣ್ಣ ಅಥವ ಅವರ ಕುಟುಂಬಸ್ಥರು ಭಾಗಿಯಾಗಿರಲಿಲ್ಲ: 

ಬಿಜೆಪಿ ವರಿಷ್ಟರ ಭೇಟಿ ವೇಳೆ ರೇವಣ್ಣನವರು ಕೂಡ ದೆಹಲಿಯಲ್ಲಿದ್ದರು, ಅಂದು ಬೆಳಗ್ಗೆ 6 ಕ್ಕೆ ಫ್ಲೈಟ್​ ಬುಕ್​ ಆಗಿತ್ತು, ಕಾರಣ ಹೊಳೆನರಸಿಪುರದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿತ್ತು ಅದಕ್ಕಾಗಿ ಬಿಜೆಪಿ ವರಿಷ್ಠರ ಭೇಟಿಗೆ ಬಂದಿರಲಿಲ್ಲ ಇದರಲ್ಲಿ ಯಾವುದೇ ಗೊಂದಲವಿಲ್ಲ

ಕಾವೇರಿ ವಿಚಾರಕ್ಕೆ ನಮ್ಮ ಬೆಂಬಲ ಸದಾ ಇರಲಿದೆ:

ರೈತರಿಗೆ ಕಾವೇರಿ ವಿಚಾರದಲ್ಲಿ ನ್ಯಾಯ ಒದಗಿಸುವ ಸಲುವಾಗಿ ಸದಾ ಅವರೊಂದಿಗೆ ಇರಲಿದ್ದೇವೆ ಎಂದು ಈ ಹಿಂದೆಯೂ ಕುಮಾರಣ್ಣ ಹೇಳಿದ್ದಾರೆ ನಾವು ಅವರ ಮಾತಿಗೆ ಬದ್ದರಾಗಿದ್ದೇವೆ ಎಂದರು.

ಈ ವೇಳೆ ಮಾಜಿ ಸಚಿವ ಮುನಿರತ್ನ, ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಪುತ್ರ ಸಿರಿಸ್ ಕುಪೇಂದ್ರ ರೆಡ್ಡಿ
ಇದ್ದರು.

RELATED ARTICLES

Related Articles

TRENDING ARTICLES