Wednesday, January 22, 2025

ಬೃಹತ್ ಸ್ಕೋರ್.. ಆಸಿಸ್​ಗೆ 400 ರನ್ ಟಾರ್ಗೆಟ್ ನೀಡಿದ ಭಾರತ

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 399 ರನ್​ ಗಳಿಸಿದೆ. ಈ ಮೂಲಕ ಆಸಿಸ್​ಗೆ 400 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ.

ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಬಳಿಕ ಶುಭಮನ್ ಗಿಲ್ ಹಾಗೂ ಶ್ರೇಯಸ್​ ಅಯ್ಯರ್ ಆಸಿಸ್​ ವೇಗಿಗಳನ್ನು ಮನಬಂದಂತೆ ದಂಡಿಸಿದರು. ಇಬ್ಬರು ಬೊಂಬಾಟ್ ಶತಕ ದಾಖಲಿಸಿದರು. ಬಳಿಕ, ನಾಯಕ ಕೆ.ಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಇಂದೋರ್​ ಮೈದಾನದಲ್ಲಿ ಘರ್ಜಿಸಿದರು.

ಶುಭಮನ್ ಗಿಲ್ 104, ಶ್ರೇಯಸ್ ಅಯ್ಯರ್ 105, ಕೆ.ಎಲ್ ರಾಹುಲ್ 52, ಸೂರ್ಯಕುಮಾರ್ ಯಾದವ್ ಅಜೇಯ 72*, ಇಶಾನ್ ಕಿಶನ್ 31 ರನ್​ ಸಿಡಿಸಿದರು. ಆಸಿಸ್ ಪರ ಗ್ರೀನ್ 2 ವಿಕೆಟ್ ಪಡೆದರೂ 10 ಓವರ್​ಗೆ 103 ರನ್​ ಬಿಟ್ಟುಕೊಟ್ಟು ಅತ್ಯಂತ ದುಬಾರಿ ಬೌಲರ ಎನಿಸಿಕೊಂಡರು. ಜೋಶ್, ಎಬಾಟ್ ಹಾಗೂ ಝಂಪಾ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES