Monday, December 23, 2024

ಆಸಿಸ್ ವಿರುದ್ಧ ಗಿಲ್ ಅಮೋಘ ಶತಕ

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಯಂಗ್​ ಗನ್​ ಶುಭಮನ್ ಗಿಲ್ ಅಮೋಘ ಶತಕ ಸಿಡಿಸಿದ್ದಾರೆ.

92 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಏಕದಿನದಲ್ಲಿ 6ನೇ ಶತಕ ಪೂರೈಸಿದರು.

ಏಕದಿನದಲ್ಲಿ 35 ಪಂದ್ಯ ಆಡಿರುವ ಶುಭಮನ್ ಗಿಲ್ ಅವರು ಒಂದು ದ್ವಿಶತಕ, 6 ಶತಕ ಹಾಗೂ 9 ಅರ್ಧಶತಕಗಳೊಂದಿಗೆ 1,917 ರನ್ ಗಳಿಸಿದ್ದಾರೆ. 102.84ರ ಸ್ಟ್ರೈಟ್ ರೇಟ್​ನಲ್ಲಿ ಗಿಲ್ ಅಬ್ಬರಿಸುತ್ತಿದ್ದಾರೆ.

ಈಗ ನಾಯಕ ಕೆ.ಎಲ್ ರಾಹುಲ್ (35*) ಹಾಗೂ ಇಶಾನ್ ಕಿಶನ್ (8) ಕ್ರಿಸ್​ನಲ್ಲಿದ್ದಾರೆ. ಕೆ.ಎಲ್ ರಾಹುಲ್ 19 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿ ಆಸಿಸ್​ ಬೌಲರ್​ಗಳನ್ನು ದಂಡಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES