Wednesday, January 22, 2025

ಅಬ್ಬರಿಸಿದ ಅಯ್ಯರ್.. ಆಸಿಸ್​ ವಿರುದ್ಧ ಭರ್ಜರಿ ಶತಕ

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್ ಬೊಂಬಾಟ್ ಶತಕ ಸಿಡಿಸಿದ್ದಾರೆ.

86 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಏಕದಿನದಲ್ಲಿ 3ನೇ ಶತಕ ಪೂರೈಸಿದರು. ಈ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿರುವ ಅಯ್ಯರ್ ತಮ್ಮ ಕಂಬ್ಯಾಕ್​ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಗಾಯದ ಸಮಸ್ಯೆಯಿಂದ ಬಹಳ ದಿನ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದ ಶ್ರೇಯಸ್​ ಅಯ್ಯರ್ ಆಸಿಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ರನ್​ ಔಟ್​ ಆಗಿದ್ದರು. ಇಂದು ಭಾರತಕ್ಕೆ ಆರಂಭಿಕ ಆಘಾತ ಉಂಟಾದ ಬಳಿಕ ಕ್ರೀಸ್​ಗಿಳಿದ ಅಯ್ಯರ್ ಅವರು ಶುಭ್ಮನ್ ಗಿಲ್​ ಜೊತೆ ಬೊಂಬಾಟ್ ಜೊತೆಯಾಟ ಆಡಿದರು.

RELATED ARTICLES

Related Articles

TRENDING ARTICLES