Sunday, December 22, 2024

ಡಾ. ಸುಧಾಮೂರ್ತಿಯವರ ಹೆಸರು ಬಳಸಿ ವಂಚನೆ

ಬೆಂಗಳೂರು : ಇನ್ಫೋಸಿಸ್ ಮುಖ್ಯಸ್ಥೆ ಡಾ. ಸುಧಾಮೂರ್ತಿಯವರ ಹೆಸರು ಬಳಸಿ ಇಬ್ಬರು ಮಹಿಳೆಯರು ವಂಚನೆ ಎಸಗಿರುವ ಕುರಿತು ದೂರು ದಾಖಲಾಗಿದೆ.

(KKKNC annada koota of northen California) ದಿಂದ 50 ನೇ ವರ್ಷದ ಕಾರ್ಯಕ್ರಮಕ್ಕೆ ಸುಧಾಮೂರ್ತಿಯವರಿಗೆ ಆಹ್ವಾನನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಸುಧಾಮೂರ್ತಿಯವರು ಕಾರ್ಯಕ್ರಮಕ್ಕೆ ಬರು ಆಗುವುದಿಲ್ಲ ಎಂದು ಇಮೇಲ್ ಮೂಲಕ ಸಂದೇಶವನ್ನು ಕಳುಹಿಸಿದ್ದಾರೆ.

ಇದರ ಬೆನ್ನಲ್ಲೇ ಶೃತಿ ಹಾಗೂ ಲಾವಣ್ಯ ಎಂಬ ಮಹಿಳೆಯರು ಸುಧಾಮೂರ್ತಿಯವರ ಪೋಟೋಗಳನ್ನು ಬಳಿಸಿಕೊಂಡು ಮೂರ್ತಿ ಟ್ರಸ್ಟ್ ನ ಕಚೇರಿ ಎಂದು ಹೆಸರು ಸೃಷ್ಠಿಸಿ ಸುಧಾಮೂರ್ತಿಯವರ ಅಸಿಸ್ಟಂಟ್ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಲಾವಣ್ಯ ಎಂಬುವರು ಕಾರ್ಯಕ್ರಮಕ್ಕೆ ಸುಧಾಮೂರ್ತಿ ಮೇಡಂ ಬರೋದಾಗಿ ಹೇಳಿ ವಂಚನೆ‌‌ಯನ್ನು ಮಾಡಿದ್ದಾರೆ.

ಇದನ್ನು ಓದಿ : ಕಿರುತರೆ ನಟಿಯ ಮೇಲೆ ಕಿರಿಕ್ ಆರೋಪ

ಇನ್ನೂ ಅಮೇರಿಕಾದಲ್ಲಿ meet and greet with dr ಸುಧಾಮೂರ್ತಿ ಎಂದು ಅಮೇರಿಕಾದ sewa milpitas ಎಂಬಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಟಿಕೇಟ್ ಮಾರಾಟ ಮಾಡುತ್ತಿದ್ದರು. ಪ್ರತಿ ಟಿಕೇಟ್ ಗೆ 40 ಡಾಲರ್ ಪಡೆದಿರುವ ಆರೋಪ ಕೇಳಿಬಂದಿದೆ. ಈ ಘಟನೆ ಕುರಿತು ಕಂಪನಿಯಲ್ಲಿ ಪ್ರಶ್ನಿಸಿದಾಗ ವಂಚನೆ ಬೆಳಕಿಗೆ ಬಂದಿದೆ.

ಸದ್ಯ ಈ ಘಟನೆ ಹಿನ್ನೆಲೆ ಸುಧಾಮೂರ್ತಿಯವರ ಪರ್ಸನಲ್ ಅಸಿಸ್ಟೆಂಟ್ ಮಮತ ಸಂಜಯ್ ಎಂಬುವವರು ಜಯನಗರ ಪೋಲಿಸ್ ಠಾಣೆಗೆ ಶೃತಿ ಹಾಗೂ ಲಾವಣ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಐಟಿ ಆಕ್ಟ್ 66c ,66d ಹಾಗೂ ಐಪಿಸಿ 419 ,420 ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES