Sunday, December 22, 2024

5 ಲಕ್ಷಕ್ಕೂ ಹೆಚ್ಚು ಸಾಲ : ಟೊಮೊಟೋ ಬೆಳೆದು ಕಂಗಾಲದ ಬೀದರ್ ರೈತ

ಬೀದರ್ : ಮೂರು ತಿಂಗಳ ಹಿಂದೆ ಟೊಮೊಟೋ ಬೆಳೆ ಅಂದರೆ ಬಂಗಾರದ ಬೆಳೆ ಎಂಬಂತಾಗಿತ್ತು. ಒಂದು ಎಕರೆಯಲ್ಲಿ ಟೊಮೊಟೋ ಬೆಳೆ ಇದ್ದರೆ ಸಾಕು ಅಬ್ಬಬ್ಬಾ ಲಕ್ಷಾಧಿಪತಿ ಎನ್ನುತ್ತಿದ್ದರು. ಆದರೆ ಈಗ ಟೊಮೊಟೋ ದರದಲ್ಲಿ ಧಿಡೀರ್ ಕುಸಿತದಿಂದ ಬೀದರ್​ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತರ ಪರಿಸ್ಥಿತಿ ಒಂದು ರೀತಿ ಲಾಟರಿ ಖರೀದಿಸಿದ ಹಾಗೆ ಆಗಿದೆ. ಲಾಟರಿ ಹತ್ತಿದರೇ ಲಕ್ಷಾಧಿಪತಿ, ಕೋಟ್ಯಾಧಿಪತಿ ಆಗಬಹುದು, ಲಾಟರಿ ಬರಲಿಲ್ಲ ಅಂದ್ರೆ ರೋಡಲ್ಲಿ ಮಲಗುವ ಸ್ಥಿತಿ. ಬೀದರ್​ನ ಬಡ ಕುಟುಂಬದ ರೈತನ ಪರಿಸ್ಥಿತಿ ಅದೇ ಆಗಿದೆ.

ಬಡ್ಡಿಯಿಂದ 5 ಲಕ್ಷದವೆಗೂ ಸಾಲ ತಂದು 3 ಎಕರೆ ಜಮೀನನಲ್ಲಿ ಟೊಮೊಟೋ ಹಾಕಿದ್ದೇವೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ನಾವು ಈಗ ಏನೂ ಮಾಡಬೇಕೊ ದಿಕ್ಕು ತೋಚದಂತಾಗಿದೆ ಎಂದು ಬೀದರ್​ನ ಭಾಲ್ಕಿ ತಾಲೂಕಿನ ಹಾಲಹಿಪ್ಪರ್ಗಾ ಗ್ರಾಮದ ರೈತ ವೈಜಿನಾಥ್ ಗೋಳು.

5 ಲಕ್ಷಕ್ಕೂ ಅಧಿಕ ಖರ್ಚು

ಟೊಮೊಟೋ ಬೆಳೆಗೆ ಭರ್ಜರಿ ಬೆಲೆ ಸಿಗುತ್ತಿದೆ ಎಂದು 3 ತಿಂಗಳ ಹಿಂದೆ 5 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ 3 ಎಕರೆ ಭೂಮಿಯಲ್ಲಿ ಟೊಮೊಟೋ ಬೆಳೆದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಟೊಮೊಟೋ ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರು ಕಟಾವಿನ ಕೂಲಿ ಹಣ ಸಿಗದಂತ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕೇವಲ 5 ರೂ.ಗೆ ಖರೀದಿ

3 ತಿಂಗಳ ಹಿಂದೆ ಕಿಲೋಗೆ 120 ರಿಂದ 150 ರೂ. ಇದ್ದ ಟೊಮೊಟೋ ಈಗ ಕೇವಲ 20 ರಿಂದ 25 ರೂ. ಇದೆ. ಅಂದು ಒಂದು ಕ್ಯಾರೆಟ್​ಗೆ 2 ಸಾವಿರ ಇತ್ತು. ಇವತ್ತು ಒಂದು ಕ್ಯಾರೆಟ್ ಟೊಮೊಟೋಗೆ 200 ರಿಂದ 300 ಕೊಡುತ್ತಿದ್ದಾರೆ. ಅಂದ್ರೆ ರೈತರಿಂದ ಡಿಲರ್​​ಗಳು ಕೇವಲ 5 ರೂ.ನಂತೆ ಖರೀಸುತ್ತಿದ್ದಾರೆ. ಅಂದಿನ ದರ ನೋಡಿ ಸಾಲ ಮಾಡಿ ಟೊಮೊಟೋ ಬೆಳೆದ ರೈತನ ಕುಟುಂಬದಲ್ಲಿಗ ವಿಘ್ನ ಶುರುವಾಗಿದೆ.

ರೈತನಿಗೆ ಒಮ್ಮೆ ಅತಿವೃಷ್ಠಿ, ಮತ್ತೊಮ್ಮೆ ಅನಾವೃಷ್ಠಿ ಸ್ಥಿತಿ ದೆವ್ವ-ಭೂತಗಳಂತೆ ಕಾಡುತ್ತಿರುತ್ತವೆ. ಎಲ್ಲಾ ಸರಿಯಾಗಿ ಬಂದರೂ ಬೆಂಬಲ ಬೆಲೆ ಸಿಗದೇ ಬೆಳೆದ ಬೆಳೆ ರಸ್ತೆಯಲ್ಲಿ ಬಿಸಾಕುವಂತ ಸ್ಥಿತಿ ನಿರ್ಮಾಣವಾಗುತ್ತದೆ. ಅಂತದೆ ಪರಿಸ್ಥಿತಿ ರೈತ ವೈಜಿನಾಥ್​ಗೂ ಬಂದಿದೆ. ಈ ರೈತನ ಕಣ್ಣೋರಿಸುವ ಕೆಲಸ ಸರ್ಕಾರ ಮಾಡಬೇಕಾಗಿದೆ.

RELATED ARTICLES

Related Articles

TRENDING ARTICLES