Sunday, December 22, 2024

ಮೋದಿ ಮೇಲೆ ಗೂಬೆ ಕೂರಿಸೋದು ಇವರ ಕೆಲಸ : ಪ್ರಲ್ಹಾದ್ ಜೋಶಿ

ಧಾರವಾಡ : ಮಲ್ಲಿಕಾರ್ಜುನ ಖರ್ಗೆ ಅವರು ಈವರೆಗೆ ಯಾಕೆ ಇಬ್ಬರನ್ನು ಕರೆದು ಮಾತನಾಡಿಲ್ಲ. ಮೈತ್ರಿ ನಾಯಕರು ಖರ್ಗೆ ಅವರೇ, ಯಾಕೆ ಇಬ್ಬರನ್ನು ಕರೆದು ಮಾತನಾಡಿಲ್ಲ. ಎಲ್ಲವನ್ನೂ ಪ್ರಧಾನಿ ಮೋದಿ ಮೇಲೆ ಗೂಬೆ ಕೂರಿಸೋದು ಇವರ ಕೆಲಸ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದ ವಿಚಾರದಲ್ಲಿ ಕಾಂಗ್ರೆಸ್​ ನಾಯಕರು ರಾಜಕಾರಣ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಡಿಎಂಕೆ ಅವರಿಗೆ ದಿನ ಬೆಳಗ್ಗೆ ಎದ್ರೆ ಪ್ರಧಾನಿ ಮೋದಿ ಅವರನ್ನು ಬಯ್ಯೋದೇ ಕೆಲಸ. ಸಿದ್ದರಾಮಯ್ಯ ಅವರ ತರಹ ಮೋದಿ ಅವರನ್ನು ಬೈಯೋದು ಅವರ ಕೆಲಸ‌. ನಾವು ಕರೆದರೆ ಯಾಕೆ ಅವರು ಬರ್ತಾರೆ? ಜನರನ್ಮು ತಪ್ಪು ದಾರಿಗೆ ಎಳೆಯಲು ಸಿದ್ದರಾಮಯ್ಯ ನಿಸ್ಸೀಮರು. ತಪ್ಪು ಮುಚ್ಚಿ ಹಾಕಲು ಜನರನ್ನು ತಪ್ಪು ದಾರಿಗೆ ಎಳೆಯಲು ಸಿದ್ದರಾಮಯ್ಯ ನಿಸ್ಸೀಮರು ಎಂದು ಲೇವಡಿ ಮಾಡಿದರು.

ಶಾಲು, ಪೇಟ ಹಾಕಿ ಸ್ವಾಗತ ಮಾಡಿದ್ದೀರಿ

ನಾವು ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೇ ಹೇಳಿದ್ದೇವೆ. CWMAನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ಮಾಡೋಕೆ ಬರಲ್ಲ. ಇದು ಸೌಹಾರ್ದಯುತವಾಗಿ ಬಗೆಹರಿಸಬೇಕು. ನೀವು ಮೊದಲು ಶಾಲು, ಪೇಟ ಹಾಕಿ ಸ್ವಾಗತ ಮಾಡಿದ್ದೀರಿ. ತಮಿಳುನಾಡಿನಲ್ಲಿ ಬೆಳೆಗೆ ಜಾಸ್ತಿ ನೀರು ಉಪಯೋಗಿಸಿದ್ದಾರೆ. ಅವರ ಮೈತ್ರಿ ಪಕ್ಷಕ್ಕೆ ಒಂದಿಷ್ಟು ಸಮಯ ಕೇಳಬಹುದಿತ್ತು ಎಂದು ಹೇಳಿದರು.

RELATED ARTICLES

Related Articles

TRENDING ARTICLES