Sunday, December 22, 2024

ಜಯಲಲಿತಾ ಒತ್ತಡಕ್ಕೆ ಮಣಿದು ರಾಜ್ಯಕ್ಕೆ ಅನ್ಯಾಯ ಮಾಡಿದ್ರು : ಕುಮಾರಸ್ವಾಮಿ

ಮಂಡ್ಯ : 1989ರ ವರೆಗೆ ಯಾವ ಮುಖ್ಯಮಂತ್ರಿಗಳು ಟ್ರಿಬ್ಯುನಲ್​ಗೆ ಅವಕಾಶ ಕೊಟ್ಟಿರಲಿಲ್ಲ. ಟ್ರಿಬ್ಯುನಲ್ ರಚನೆ ಆದಮೇಲೆ ಜಯಲಲಿತಾ ಹಾಗೂ ಕರುಣಾನಿಧಿ ಒತ್ತಡಕ್ಕೆ ಮಣಿದು ರಾಜ್ಯಕ್ಕೆ ಅನ್ಯಾಯ ಮಾಡಿದ್ರು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಹಮ್ಮಿಕೊಂಡಿದ್ದ ಕಾವೇರಿ ಪ್ರತಿಭಟನೆಯಲ್ಲಿ ಮಾತನಾಡಿ, ಅವರು ಕೇಳಿದಾಗ 3 ರಿಂದ 4 ಟಿಎಂಸಿ ನೀರು ಬಿಡ್ತಿದ್ರು. ಅದಾದ ಬಳಿಕ ಬಂದ ಸರ್ಕಾರ ತಮಿಳುನಾಡು ಜೊತೆ ಸಮನ್ವಯ ನಡೆಸಲಿಲ್ಲ. ಆಗ ಅವರು ಸುಪ್ರೀಂ ಕೋರ್ಟ್​ಗೆ ಹೋಗಿ ಟ್ರಿಬ್ಯುನಲ್ ರಚನೆ ಮಾಡಿದ್ರು. ಅಂದಿನ ಸಿಎಂ ಮಾಡಿದ ನಿರ್ಲಕ್ಷ್ಯ ಈ ಟ್ರಿಬ್ಯುನಲ್ ರಚನೆ ಎಂದು ತಿಳಿಸಿದರು.

ನಮ್ಮ ರಾಜ್ಯದ ರೈತರನ್ನು ಉಳಿಸಲು ದೇವೇಗೌಡರು ಹೋರಾಟ ಮಾಡಿದ್ದಾರೆ. ಅವರ ಮಾರ್ಗದರ್ಶನವನ್ನು ಕೆಲವರು ನಿರ್ಲಕ್ಷ್ಯ ಮಾಡಿದ್ರು. ಅದರ ಪರಿಣಾಮ ನಮಗೆ ಹಲವು ರೀತಿಯ ಪೆಟ್ಟು ಬಿದ್ದಿದೆ‌. 1994ರಲ್ಲಿ ದೇವೇಗೌಡರು ಸಿಎಂ ಆದಾಗಲೂ ನೀರಿನ ಕೊರತೆ ಇತ್ತು. ಆಗ ದೇವೇಗೌಡರು ವಾಸ್ತವ ಸ್ಥಿತಿ ಅವರಿಗೆ ಮನವರಿಕೆ ಮಾಡಿದ್ರು. ಅವರ ಮನವಿಗೆ ಸ್ಪಂದಿಸಿ ಕೇವಲ 5 ಟಿಎಂಸಿ ನೀರು ಬಿಟ್ಟಿದ್ರು. ಆಗಲೂ ಕೆಲವರು ದೇವೇಗೌಡರ ವಿರುದ್ಧ ಹೋರಾಟ ಮಾಡಿದ್ರು. ಬಳಿಕ ಅದೇ ದಿನ ಸುರಿದ ಮಳೆಗೆ ಡ್ಯಾಂ ತುಂಬೊಯ್ತು ಎಂದು ಹೇಳಿದರು.

ಯಾವ ಸರ್ಕಾರವೂ ಸರಿಪಡಿಸಿಲ್ಲ

ಕಳೆದ ನಾಲ್ಕು ವರ್ಷ ಮಳೆ ಆಗಿದ್ದರಿಂದ ರೈತರು ಆತಂಕ ಪಡುವ ಅಗತ್ಯ ಇರಲಿಲ್ಲ. ಈ ವರ್ಷ ಮಳೆ ಇಲ್ಲದೇ ರೈತರ ಬೆಳೆ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ತಮಿಳುನಾಡು ಈಗ ಒತ್ತಡ ಹೇರುತ್ತಿದೆ. ಈ ಸಂದರ್ಭದಲ್ಲಿ ನಮ್ಮ ನೀರನ್ನು ಉಳಿಸಿಕೊಳ್ಳಬೇಕು. ನಾವು ರಾಜಕಾರಣಕ್ಕೆ ಬರೋದಕ್ಕೂ ಮುಂಚೆಯೇ ಈ ನೀರಿನ ವಿವಾದ ಇದೆ. ಈ ಅನ್ಯಾಯವನ್ನು ಯಾವ ಸರ್ಕಾರವೂ ಸರಿಪಡಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES