Sunday, December 22, 2024

ನಾನು ಯಾವತ್ತೊ ಮಣ್ಣಿಗೆ ಹೋಗಬೇಕಿತ್ತು : ಕುಮಾರಸ್ವಾಮಿ

ಮಂಡ್ಯ : ಮೂರನೇ ಬಾರಿ ಜನ್ಮ ಪಡೆದು ಬಂದಿದ್ದೇನೆ. ನಾನೂ ಯಾವತ್ತೊ ಮಣ್ಣಿಗೆ ಹೋಗಬೇಕಿತ್ತು. ದೇವರ ಆಶೀರ್ವಾದ, ಜನರ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಕಾವೇರಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ರಾಜ್ಯದ ಜನರನ್ನು ಉಳಿಸಲು. ಸಾರ್ವಜನಿಕರ ಮುಂದೆ ನಾನು ಜಾಗಟೆ ಹೊಡೆಯಲ್ಲ ಎಂದರು.

ನನ್ನ ಹಾಗೂ ದೇವೇಗೌಡರನ್ನ ಬೆಳೆಸಿದ್ದು ನೀವು. ಐದು ವರ್ಷ ನನಗೆ ಅಧಿಕಾರ ಕೊಡಿ ಎಂದಿದ್ದೆ. ಸಮಸ್ಯೆ ಬಗೆಹರಿಸದಿದ್ದರೇ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದಿದ್ದೆ. ರಾತ್ರಿ 3 ಗಂಟೆಯಾದ್ರೂ ಹಳ್ಳಿ ಹಳ್ಳಿ ಸುತ್ತಿ ಬಂದೆ. ಆದರೆ, ಜನರು ನನಗೆ ಆಶೀರ್ವಾದ ಮಾಡಲಿಲ್ಲ. ಈಗ ಗೆದ್ದವರು ಪಕ್ಷ ವಿಸರ್ಜಿಸಿ ಅಂತಾರೆ. ಆದರೆ, ಇವರು ನಿಮ್ಮ ಸಮಸ್ಯೆ ಕೇಳುತ್ತಿದ್ದಾರೆಯೇ? ಇವರು ಏನು ಮಾಡುತ್ತಿದ್ದಾರೆ? ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ನೀರು ನಿಲ್ಲಿಸಿದರೆ ನ್ಯಾಯಾಂಗ ನಿಂದನೆ ಆಗಲ್ಲ

ಸುಪ್ರೀಂ ಕೋರ್ಟ್ ತೀರ್ಪಿನಂತೆ ನೀರು ಬಿಡಬೇಕು. ಇಲ್ಲದಿದ್ದರೇ ನ್ಯಾಯಾಂಗ ನಿಂದನೆ ಆಗುತ್ತದೆ ಅಂತ ಕಾಂಗ್ರೆಸ್​ ಹೇಳುತ್ತಿದೆ. ತಮಿಳುನಾಡಿಗೆ ನೀರು ನಿಲ್ಲಿಸಿದರೆ ನ್ಯಾಯಾಂಗ ನಿಂದನೆ ಆಗಲ್ಲ. ನೀರು ಬಿಡಲು ಆಗಲ್ಲ ಅಂತ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿ. ಉತ್ತರ ಕರ್ನಾಟಕದಲ್ಲಿಯು ಬಹಳಷ್ಟು ನೀರಾವರಿ ಸಮಸ್ಯೆ ಇದೆ ಎಂದು ಸಲಹೆ ನೀಡಿದರು.

RELATED ARTICLES

Related Articles

TRENDING ARTICLES