ವಾರಣಾಸಿ : ವಾರಣಾಸಿಯಲ್ಲಿ ನೂತನ ಕ್ರಿಕೇಟ್ ಮೈದಾನ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲನ್ಯಾಸ ನೆರವೇರಿಸಿದ್ದಾರೆ.
ಲಂಡನ್ನ ಲಾರ್ಡ್ಸ್ ಕ್ರೀಡಾಂಗಣವನ್ನು ಕ್ರಿಕೆಟ್ ಕಾಶಿ ಎನ್ನಲಾಗುತ್ತದೆ. ಆದರೆ, ಇದೀಗ ಭಾರತದಲ್ಲೇ ‘ಕ್ರಿಕೆಟ್ ಕಾಶಿ’ ನಿರ್ಮಾಣವಾಗುತ್ತಿದೆ. ಕಾಶಿ ವಿಶ್ವನಾಥನ ಥೀಮ್ನಲ್ಲೇ ಹೊಸ ಕ್ರಿಕೆಟ್ ಕ್ರೀಡಾಂಗಣವೊಂದು ನಿರ್ಮಾಣವಾಗುತ್ತಿದೆ.
ಇದನನ್ನೂ ಓದಿ : ಕಾವೇರಿ ನೀರು ವಿವಾದ: ಮಂಗಳವಾರ ಬೆಂಗಳೂರು ಬಂದ್ ಗೆ ಕರೆ!
ತ್ರಿಶೂಲ, ಅರ್ಧಚಂದ್ರ, ಢಮರುಗ, ಬಿಲ್ವಪತ್ರೆಯ ವಿನ್ಯಾಸಗಳನ್ನು ಒಳಗೊಂಡ ಶಿವನ ಥೀಮ್ನಲ್ಲೇ ಈ ಕ್ರೀಡಾಂಗಣದ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿರುವುದು ವಿಶೇಷ, ಇಂದು ಈ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಪ್ರಧಾನಿ ಮೋದಿ ಅವರ ಸಂಸದೀಯ ಕ್ಷೇತ್ರವಾಗಿರುವ ವಾರಣಾಸಿಯ ಕ್ರೀಡಾಂಗಣವನ್ನು ರಾಜತಾಲಬ್‌ನ ಗಂಜಾರಿ ಏರಿಯಾದಲ್ಲಿ 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಈ ಕ್ರೀಡಾಂಗಣದ ಶಿಲನ್ಯಾಸ ಕಾರ್ಯಕ್ರಮಕ್ಕೆ ಕ್ರಿಕೇಟ್ ದಂತಕತೆ ಸಚಿನ್ ತೆಂಡಲ್ಕರ್, ಯೋಗಿ ಆದಿತ್ಯನಾಥ್, ಬಿಬಿಸಿಐನ ಜೈ ಶಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.