ದಾವಣಗೆರೆ : ಭದ್ರಾ ಡ್ಯಾಂಗೆ ನೀರು ಬಿಡದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶಗೊಂಡಿದ್ದು ದಾವಣಗೆರೆ ಬಂದ್ಗೆ ರೈತರು ಕರೆ ನೀಡಿದ್ದಾರೆ.
ಕಾವೇರಿ ನೀರಿಗಾಗಿ ಮಂಡ್ಯ ಬಂದ್ ಮಾಡಿದ್ದ ಬೆನ್ನಲ್ಲೇ 100 ದಿನ ನೀರು ಬಿಡುವುದಾಗಿ ಹೇಳಿ ಕಾಡಾ ಸಮಿತಿಯವರು ನೀರು ಬಂದ ಮಾಡಿದ್ದಾರೆ. ಭದ್ರಾ ಡ್ಯಾಂ ನೀರನ್ನು ಆನ್ ಅಂಡ್ ಆಫ್ಗೆ ನಿರ್ಧಾರ ಮಾಡಿರುವ ಕಾಡಾ ಸಮಿತಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಭದ್ರಾ ಡ್ಯಾಂ ನೀರು ಬಿಡುವ ಮುನ್ನ 100 ದಿನ ನೀರು ಬಿಡುತ್ತೇವೆ ಎಂದ ಹಿನ್ನೆಲೆ ರೈತರು ಭತ್ತ ನಾಟಿ ಮಾಡಿದ್ದರು. ಸುಮಾರು 62 ಸಾವಿರ ಹೆಕ್ಟೇರೆ ಭತ್ತ ನಾಟಿ ಮಾಡಿದ್ದು, ನೀರು ಇಲ್ಲದೆ ಬೆಳೆ ನಾಶವಾಗಿ ಹೋಗಿದೆ. ಇದರಿಂದ ಆಕ್ರೋಶಗೊಂಡ ರೈತರು ದಾವಣಗೆರೆ ಭಾರತೀಯ ರೈತ ಒಕ್ಕೂಟ ಸೋಮವಾರ ದಾವಣಗೆರೆ ಬಂದ್ ಘೋಷಣೆಯನ್ನು ಮಾಡಿದೆ. ಆದ್ದರಿಂದ ಸೋಮವಾರ ರೈಸ್ ಮಾಲೀಕರು, ಎಲ್ಲ ಅಂಗಡಿ ಮುಂಗಟ್ಟು, ಹೋಟೆಲ್ ಮಾಲಿಕರಿಗೆ ಬಂದ್ಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನು ಓದಿ : ಶಾಸಕ ವಿನಯ್ ಕುಲಕರ್ಣಿ ಅರ್ಜಿ ವಜಾ : ಧಾರವಾಡಕ್ಕಿಲ್ಲ ಪ್ರವೇಶ
ಅಷ್ಟೇ ಅಲ್ಲ ಬದ್ರಾದಿಂದ ನೀರು ಹರಿಸುವ ವಿಚಾರದಲ್ಲಿ ಸಚಿವ ಮಧು ಬಂಗಾರಪ್ಪ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಅವರ ವಿರುದ್ಧ ರೈತರು ಆಕ್ರೋಶಕ್ಕೆ ಒಳಗಾಗಿದ್ದಾರೆ. ತಂಗಿ ಗೀತಾ ಶಿವರಾಜ್ ಕುಮಾರ್ ಅವರನ್ನ ಚುನಾವಣೆ ನಿಲ್ಲಿಸಲು ನೀರು ಬಂದ್ ಮಾಡಿದ್ದಾರೆ. ಹಾಗೂ ಬೇಸಿಗೆಯಲ್ಲಿ ಅಡಿಕೆ ಬೆಳೆಗಾರರಿಗೆ ಹಾಗೂ ಶಿವಮೊಗ್ಗದಲ್ಲಿ ಅಡಿಕೆ ಬೆಳೆಯುವ ರೈತರನ್ನ ಓಲೈಸಲು ತಂಗಿಯನ್ನ ಚುನಾವಣೆಗೆ ನಿಲ್ಲಿಸಲು ಓಲೈಕೆ ರಾಜಕಾರಣ ಮಾಡುತಿದ್ದಾರೆ ಅಂತ ರೈತರು ಕಿಡಿಕಾರಿದ್ದಾರೆ.
ಭಾನುವಾರ ಸಾಯಂಕಾಲದ ಒಳಗೆ ನೀರು ಬಿಡಲು ಆದೇಶವಾಗದೆ ಇದ್ದಲ್ಲಿ ದಾವಣಗೆರೆ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ರೈತರು ಸೂಚನೆ ನೀಡಿದ್ದಾರೆ. ಹಾಗೂ ಶಾಲಾ ಕಾಲೇಜು, ಆಸ್ಪತ್ರೆ ಹೊರತು ಪಡಿಸಿ ಎಲ್ಲರೂ ಬಂದ್ ಗೆ ಬೆಂಬಲ ನೀಡಲು ಮನವಿ