Wednesday, January 22, 2025

ಬೆಂಗಳೂರಿನ 19 ಮಂದಿ ಸಂಚಾರಿ ಪೊಲೀಸರ ಅಮಾನತು

ಬೆಂಗಳೂರು : ಒಂದೇ ದಿನ ಬೆಂಗಳೂರಿನ 19 ಮಂದಿ ಸಂಚಾರಿ ಪೊಲೀಸರನ್ನು ಅಮಾನತು ಮಾಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.

ಅಶಿಸ್ತು ಹಿನ್ನಲೆ‌ ಕಾಮಾಕ್ಷಿ ಪಾಳ್ಯ ಸಂಚಾರಿ ಠಾಣೆಯ 14 ಸಿಬ್ಬಂದಿ ಹಾಗೂ ಮಾಗಡಿ ರಸ್ತೆ ಸಂಚಾರಿ ಠಾಣೆಯ 5 ಸಿಬ್ಬಂದಿಯನ್ನು ಅಮಾನತು ಮಾಡಿ‌ ಪಶ್ಚಿಮ ವಿಭಾಗ (ಸಂಚಾರ) ಡಿಸಿಪಿ ಆದೇಶ ಹೊರಡಿಸಿದ್ದಾರೆ.

ಕರ್ತವ್ಯದ ವೇಳೆ ಅಶಿಸ್ತು ಹಿನ್ನಲೆಯಲ್ಲಿ ಒರ್ವ ಪಿಸಿ , ಹೆಚ್.ಸಿ, ಎಎಎಸ್​ಐ ಸೇರಿ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ 5 ಜನ, ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ 14 ಜನರಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ಅಮಾನತ್ತುಗೊಳಿಸಿ ಇಲಾಖಾ ತನಿಖೆಗೆ ಡಿಸಿಪಿ ಆದೇಶಿಸಿದ್ದಾರೆ.

RELATED ARTICLES

Related Articles

TRENDING ARTICLES