Sunday, December 22, 2024

ಮೊಮ್ಮಗಳನ್ನೇ ಕೊಂದನಾ ತಾತ? : ನೀರಿನ ತೊಟ್ಟಿಯಲ್ಲಿ ಹೆಣ್ಣು ಮಗು ಶವ ಪತ್ತೆ

ಚಿಕ್ಕಬಳ್ಳಾಪುರ : ನೀರಿನ ತೊಟ್ಟಿಯಲ್ಲಿ ಎರಡು ವರ್ಷದ ಹೆಣ್ಣು ಮಗುವಿನ ಶವ ಪತ್ತೆಯಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ರೇಚನಾಯಕನಪಲ್ಲಿ ಗ್ರಾಮದಲ್ಲಿ ನಡೆದಿದೆ.

ರೇಚನಾಯಕನಪಲ್ಲಿ ಗ್ರಾಮದ ಕನ್ಯಾಕುಮಾರಿ ಹಾಗೂ ರಾಜಶೇಖರರೆಡ್ಡಿ ದಂಪತಿಯ ಮಗು ಶ್ರೀಲಲಿತಾ ರೆಡ್ಡಿ (2) ಮೃತ ದುರ್ದೈವಿ.

ಕೌಟುಂಬಿಕ ಕಲಹ ಹಿನ್ನಲೆ ಈ ಎರಡು ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ. ಶ್ರೀಲಲಿತಾ ರೆಡ್ಡಿಯನ್ನು ತಾತನೇ ಕೊಲೆ ಮಾಡಿರಬಹುದು. ಮಗುವಿನ ಸಾವಿನ ಹಿಂದೆ ತಾತ ಸೋಮಶೇಖರರೆಡ್ಡಿಯ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? : ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹೂ ಮಾರುತ್ತಿದ್ದ ಯುವಕ

ಈ ಸಂಬಂಧ ಪಾತಪಾಳ್ಯ ಪೊಲೀಸ್ ಠಾಣೆಗೆ ಮೃತ ಮಗುವಿನ ತಾಯಿ ಕನ್ಯಾಕುಮಾರಿ ದೂರು ನೀಡಿದ್ದಾರೆ. ಮಾವ ಸೋಮಶೇಖರರೆಡ್ಡಿಯ ಮೇಲೆ ಸೊಸೆ ಕನ್ಯಾಕುಮಾರ್ ಅನುಮಾನ ಪಟ್ಟಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ಮಗುವನ್ನು ಕೊಲೆ ಮಾಡಿರಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES

Related Articles

TRENDING ARTICLES