ಬೆಂಗಳೂರು : ರಾಜಕೀಯ ಮಾತಾಡೋಕೆ ಸಮಯ ಸಿಗುತ್ತೆ. ಜೆಡಿಎಸ್ಗೆ ಮೈತ್ರಿ ಬಗ್ಗೆ ಕಾಳಜಿ ಇದೆಯೇ ಹೊರತು, ಕಾವೇರಿ ಬಗ್ಗೆ ಕಾಳಜಿ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಪಕ್ಷಗಳ ಸಭೆಗೆ ಎಲ್ಲರನ್ನೂ ಆಹ್ವಾನಿಸಿದ್ದೆವು. ಮೀಡಿಯಾ ಮುಂದೆ ಒಗ್ಗಟ್ಟಾಗಿರಬೇಕು ಅಂತ ಮಾತಾಡಿ.. ಹೊರಗಡೆ ಬಂದು ಏನ್ ಮಾತಾಡಿದ್ರು? ಹೊರಗೊಂದು ಒಳಗೊಂದು ಮಾತಾಡೋದು ಎಂದರು.
ಎಲ್ಲೆಲ್ಲಿ ಯಾರ್ಯಾರು ಮಾತನಾಡಬೇಕೋ ಅವ್ರು ಮಾತಾಡಿದ್ದಾರೆ. ಜೆಡಿಎಸ್ ಬಿಜೆಪಿಯಿಂದ ಪಾಠ ಕಲಿಯೋ ಅಗತ್ಯ ಇಲ್ಲ. ಬಿಜೆಪಿ ಎಂಪಿಗಳು ಮೋದಿ ಮುಂದೆ ಬಾಯಿತೆರೆಯಲು ಭಯ ಪಡ್ತಾರೆ. 25 ಜನ ಸಂಸದರ ಯಾಕೆ ಮಾತನಾಡ್ತಿಲ್ಲ. ಏನ್ ಅವ್ರ ಆಸ್ತಿ ಕೇಳ್ತಿದ್ದೀವಾ? ಎಂದು ಪ್ರಶ್ನಿಸಿದರು.
ಮೋದಿ ಟೈಮೇ ಕೊಟ್ಟಿಲ್ಲ
ಜೆಡಿಎಸ್ ಪ್ರಾದೇಶಿಕ ಪಕ್ಷ. ರಾಜ್ಯದ ಹಿತಾಸಕ್ತಿ ಕಾಪಾಡಲು ಸಹಜವಾಗಿ ಮಾತನಾಡಬೇಕು. ಕಾವೇರಿ ವಿಚಾರ ನಾಲ್ಕು ರಾಜ್ಯಗಳಿಗೆ ಸಂಬಂಧಿಸಿದೆ. ದಯವಿಟ್ಟು ಪ್ರಧಾನಿ ಮಧ್ಯ ಪ್ರವೇಶಿಸಬೇಕು. ಸುಪ್ರೀಂ ಕೋರ್ಟ್ನಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ. ಸಿಎಂ, ಡಿಸಿಎಂ ಹೋಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಮೊದಲ ದಿನ ಟೈಮ್ ಕೊಟ್ಟಿಲ್ಲ, ಪ್ರಧಾನಿ ಮೋದಿ ಟೈಮೇ ಕೊಟ್ಟಿಲ್ಲ ಎಂದು ಹೇಳಿದರು.