ರಾಯಚೂರು : ಅಂದಿನ ಕಾನೂನು ಬೇರೆ ಇವತ್ತಿನ ಕಾನೂನು ಬೇರೆ. ಕಾವೇರಿ ಉತ್ತರಾನೇ ಕೊಡ್ತಿದಲ್ಲ, ಅಂದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಚಿಟಿಕೆ ಹೊಡೆಯೋದ್ರಲ್ಲಿ ಉತ್ತರ ಕೊಟ್ಟಿದ್ರು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಕಾನೂನು ಮೈ ಮೇಲೆ ಎತ್ಲಾಗ್ ಬೇಕು ಅತ್ಲಾಗ್ ಬಂದ್ ಬಿಡುತ್ತೆ. ಇವತ್ತು ಕಾನೂನಿಗೆ ವಿರುದ್ಧವಾಗಿ ಏನೂ ಮಾಡೋದಿಕ್ಕಾಗೊಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನಾದರೂ ಬಂಗಾರಪ್ಪಾಜಿಯವರು ತಗೊಂಡಂತಹ ತೀರ್ಮಾನ ತೆಗೊಳ್ಳುವಂತಹ ಸಂದರ್ಭ ಬಂದರೆ ನಾವೆಲ್ಲ ಅವರೊಟ್ಟಿಗೆ ನಿಲ್ಲುತ್ತೇವೆ. ಅಂತಹ ಟೈಮ್ ಬಂದ್ರೆ ಅದೇ ರೀತಿಯ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೆಗೆದುಕೊಳ್ಳುತ್ತಾರೆ. ಯಾಕಂದ್ರೆ ಸಿದ್ದರಾಮಯ್ಯನವರು ಅಂಥವರೇ ಎಂದು ತಿಳಿಸಿದರು.
ಪ್ರಾಧಿಕಾರದ ವಿರುದ್ಧವಾಗಿ ನಿರ್ಣಯ ತೆಗೆದುಕೊಂಡು, ಆ ಬಳಿಕ ಹೈಕೋರ್ಟ್ ಛೀಮಾರಿ ಹಾಕುತ್ತೆ ಎಂದರಿತು ಅಷ್ಟರೊಳಗೆ ಏನೆಲ್ಲಾ ಮಾಡಿ ಮುಗಿಸ್ಬೇಕಾಗಿತ್ತು ಮಾಡಿ ಮುಗಿಸಿದ್ರು. ಸಿದ್ದರಾಮಯ್ಯನವರೂ ಆ ರೀತಿ ಮಾಡ್ತಾರೆ ಎಂದು ಮಧು ಬಂಗಾರಪ್ಪ ಹೇಳಿದರು.