Wednesday, January 22, 2025

276 ರನ್​ಗಳಿಗೆ ಆಸಿಸ್ ಆಲೌಟ್, 5 ವಿಕೆಟ್ ಪಡೆದು ಮಿಂಚಿದ ಶಮಿ

ಬೆಂಗಳೂರು : ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 277 ರನ್​ಗಳ ಬೃಹತ್ ಟಾರ್ಗೆಟ್​ ಪೇರಿಸಿ ಸರ್ವಪತನ ಕಂಡಿದೆ.

ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಸಿಸ್ 277 ರನ್​ಗಳ ಬಿಗ್​ ಟಾರ್ಗೆಟ್ ನೀಡಿದೆ.

ಆಸಿಸ್​ ಪರ ಡೇವಿಡ್​ ವಾರ್ನರ್ 52, ಜೋಶ್ ಇಂಗ್ಲಿಸ್ 45, ಸ್ಟೀವ್ ಸ್ಮಿತ್ 41,  ಮಾರ್ನಸ್ ಲಾಬುಶೇನ್ 39,  ಮಾರ್ಕಸ್ ಸ್ಟೊಯಿನಿಸ್ 31 ಹಾಗೂ ಮಾರ್ಕಸ್ ಸ್ಟೊಯಿನಿಸ್ 29 ರನ್ ಗಳಿಸಿದರು. ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್ ಪಡೆದು ಮಿಂಚಿದರು. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಬುಮ್ರಾ ತಲಾ ಒಂದು ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES