Friday, January 10, 2025

ನೀರು ಕಳ್ಳನನ್ನು ನೀರುಗಳ್ಳ ಎನ್ನದೇ ಏನೆನ್ನಬೇಕು? : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಡಿ.ಕೆ. ಶಿವಕುಮಾರ್ ಸೆಟ್ಲ್ ಮೆಂಟ್ ಮಾಡಿದ್ದೇವೆ ಅಂತ ಹೇಳಿದ್ದಾರೆ. ಅವರು ಯಾರು ಸೆಟ್ಲ್ ಮೆಂಟ್ ಮಾಡಲು. ನಾನೇ ಸೆಟ್ಲ್ ಮೆಂಟ್ ಮಾಡಬಲ್ಲೆ. ಅವರಿಗಿಂತ ಮೊದಲೇ ನಾನು ಡಿಸಿಎಂ ಆದವನು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಗೂಂಡಾಗಳು ಬಳಸುವ ಭಾಷೆ ಇದು. ಅವರು ಜೈಲಿನಲ್ಲಿ ಇದ್ದು ಬಂದಿದ್ದನ್ನು ಮರೆತಿದ್ದಾರೆ. ಅಕ್ಷರಶಃ ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಕುಸಿದಿದೆ. ಗುಂಪುಗಾರಿಕೆ ಹೆಚ್ಚಾಗಿದೆ ಎಂದು ಕುಟುಕಿದರು.

ನೀರು ಕಳ್ಳನನ್ನು ನೀರುಗಳ್ಳ ಎನ್ನದೇ ಏನೆನ್ನಬೇಕು? ಡಿ.ಕೆ. ಶಿವಕುಮಾರ್ ರಾತ್ರೋರಾತ್ರಿ ಕದ್ದು ನೀರು ಬಿಟ್ಟವರು. ಇಂತಹ ನೀರು ಕಳ್ಳನನ್ನು ಕಳ್ಳ ಎನ್ನದೇ ಬೇರೇನು ಹೇಳಬೇಕು. ಡಿಕೆಶಿ ಕಳ್ಳ ನೀರುಗಂಟಿ. ಅದಕ್ಕಾಗಿ ನಾನೇಕೆ ಅವರನ್ನು ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಪ್ರಶ್ನಿಸಿದರು.

ಡಿಸಿಎಂ ಹುದ್ದೆಯಿಂದ ವಜಾಗೊಳಿಸಬೇಕು

ಡಿ.ಕೆ. ಶಿವಕುಮಾರ್ ಅವರು ಇಂಡಿಯಾ ಮೈತ್ರಿಕೂಟಕ್ಕೆ, ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ತೃಪ್ತಿ ತರಿಸಲು ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಕಾವೇರಿ ನದಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಕಾರಣ. ಅವರನ್ನು ತಕ್ಷಣವೇ ಡಿಸಿಎಂ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

RELATED ARTICLES

Related Articles

TRENDING ARTICLES