ಬೆಂಗಳೂರು : ದಲಿತ ಸಿಎಂ, ಡಿಸಿಎಂ ಬಗ್ಗೆ ಮಾತಾಡಿದ್ರೆ ತಪ್ಪೇನಿದೆ? ಅವರ ಅಭಿಪ್ರಾಯದ ಬಗ್ಗೆ ಪತ್ರ ಬರೆಯುತ್ತಾರೆ, ತಪ್ಪೇನಿದೆ? ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಸಮುದಾಯಗಳಿಗೆ ಸ್ಥಾನಮಾನ ಸಿಕ್ಕಿಲ್ಲ. ಲಂಬಾಣಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡೋಕೆ ಆಗಲಿಲ್ಲ. ಬಹಳ ಜನ ಇದ್ದಾರೆ, ಬಸವರಾಜ ರಾಯರೆಡ್ಡಿ, ಆರ್.ವಿ. ದೇಶಪಾಂಡೆ ಬಹಳಷ್ಟು ಜನ ಸಮರ್ಥರಿದ್ದಾರೆ ಎಂದರು.
ಡಿಸಿಎಂ ಹುದ್ದೆಗಳನ್ನ ಹೈಕಮಾಂಡ್ ಮಾಡಬೇಕು. ನಮ್ಮ ಹಂತದಲ್ಲಿ ಯಾವುದೂ ಇಲ್ಲ. ಹೈಕಮಾಂಡ್ ಮೂರು ಮಾಡಬಹುದು ಅಥವಾ ನಾಲ್ಕು ಡಿಸಿಎಂ ಸ್ಥಾನ ಮಾಡಬಹುದು. ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡ್ತೀವಿ. ಜವಾಬ್ದಾರಿಯುತ ಸಚಿವರು ಪತ್ರ ಬರೆಯುತ್ತಾರೆ ಎಂದು ತಿಳಿಸಿದರು.
ಬಿಜೆಪಿಯವರಿಗೆ ಅಭ್ಯರ್ಥಿಗಳೇ ಇಲ್ಲ
ಎಲ್ಲಾ ಸಮುದಾಯಗಳೂ ನಮ್ಮ ಜೊತೆಯಲ್ಲಿ ನಿಂತಿವೆ. 135 ಸ್ಥಾನ ದೊಡ್ಡ ಬಹುಮತ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಅಭ್ಯರ್ಥಿಗಳೇ ಇಲ್ಲ. ಡಿಸಿಎಂ ವಿಚಾರ ನನ್ನ ಕಡೆ ಇಲ್ಲ, ಹೈಕಮಾಂಡ್ ಏನೇ ಹೇಳಿದ್ರೂ ಒಪ್ಪಲೇಬೇಕು. ಲೋಕಸಭಾ ಚುನಾವಣೆಯಲ್ಲಿ ಇಶ್ಯೂಸ್ ಬೇರೆ ಬೇರೆ ಇರುತ್ತದೆ. ನಾವು ಮಿನಿಮಮ್ 20 ಸ್ಥಾನ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.