ಬೆಂಗಳೂರು : ಸುಪ್ರೀಂ ಕೋರ್ಟ್ ತೀರ್ಪು ಗಾಯದ ಮೇಲೆ ಬರೆ ಹೇಳದಂತಾಗಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಇದರಲ್ಲಿ ರಾಜಕೀಯ ಮಾಡುತ್ತಿಲ್ಲ. ಆದರೆ, ನಮ್ಮ ರಾಜ್ಯ ಸರ್ಕಾರದ ತಪ್ಪುಗಳನ್ನು ಎತ್ತಿ ಹೇಳಬೇಕಿದೆ ಎಂದರು.
ತಮಿಳುನಾಡು ಕೇಳುವ ಮೊದಲೇ ಕರ್ನಾಟಕ ನೀರು ಬಿಟ್ಟಿತು. ನಮ್ಮ ನೆರವಿಗೆ CWRC ಬರಲಿಲ್ಲ. ಸುಪ್ರೀಂ ಕೋರ್ಟ್ನಲ್ಲೂ ಈಗ ತೀರ್ಪು ಬಂತು. ಕೇಳುವ ಮೊದಲೇ ನೀರು ಬಿಟ್ಟಿದ್ದು ಯಾಕೆ? ಯಾರ ಭಯಕ್ಕೆ ಬಿಟ್ಟಿದ್ರು? ಡಿಎಂಕೆ ನಿಮಗೆ ಬೆದರಿಕೆ ಹಾಕಿರಬಹುದು ಎಂದು ಕುಟುಕಿದರು.
ನಿಮ್ಮ I.N.D.I.A ಭಾಗ ಆಗಬಾರದು ಎಂದರೆ ನೀರು ಬಿಡಿ ಎಂದಿರಬಹುದು. ಅಥವಾ ನಿಮ್ಮ ಹೈಕಮಾಂಡ್ ನಿಮಗೆ ನೀರು ಬಿಡಲು ಸೂಚನೆ ನೀಡಿರಬಹುದು. ಈಗ ನೀರು ಬಿಟ್ಟು ಸಭೆ ಕರೆಯುವ ಹೊಸ ಸಂಪ್ರದಾಯ ಶುರು ಮಾಡಿದ್ದೀರಿ. ನೀರು ಬಿಟ್ಟ ಮೇಲೆ ಸಂಸದರ ಸಭೆ ಮಾಡಿದ್ರಿ. ನೀರು ಬಿಟ್ಟ ಮೇಲೆ ವಾದ ಶುರು ಮಾಡಿದ್ರಿ ಎಂದು ಸಿ.ಟಿ. ರವಿ ಚಾಟಿ ಬೀಸಿದರು.