Monday, December 23, 2024

ಡಿಕೆಶಿ ಇಲ್ಲೇ ಗೂಟ ಹೊಡ್ಕೊಂಡು ಕೂತಿದ್ದಾರೆ : ಆರ್. ಅಶೋಕ್

ಬೆಂಗಳೂರು : ತಮಿಳುನಾಡು ಸಿಎಂ ಸ್ಟಾಲಿನ್ ಜೊತೆ ಡಿ.ಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅಡ್ಜೆಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಒಂದೇ ಒಂದು ಹೇಳಿಕೆ ಕೊಡ್ತಾ ಇಲ್ಲ. ಸಚಿವರು ಇಲ್ಲೇ ಗೂಟ ಹೊಡೆದುಕೊಂಡು ಕೂತಿದ್ದಾರೆ ಎಂದು ಮಾಜಿ ಸಚಿವ ಆರ್​. ಅಶೋಕ್ ಕುಟುಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ಇದ್ದಾರೆ. ಕಾಟಾಚಾಟರಕ್ಕೆ ಸಂಸದರ ಸಭೆ ಮಾಡಿದ್ದಾರೆ. ವಿಪಕ್ಷಗಳು ಬೈತಾರೆ ಅಂತ ಸಭೆ ಸಭೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ತಮಿಳುನಾಡು ಅಪಿಲ್ ಮಾಡಿದ ಮೇಲೆ ನಮ್ಮವರು ಮಾಡಿದ್ದಾರೆ. ಮೊದಲೇ ಮಾಡೋಕೆ ಏನಾಗಿತ್ತು? ನೀವು ಫಾಲೊ ದಿ ಸ್ಟಾಲಿನ್ ಮಾಡ್ತಾ ಇದ್ದೀರಿ. ಮಾಹಿತಿ ಸರಿಯಾಗಿ ನೀಡಿಲ್ಲ. ಯಾವ ಸಮಯದಲ್ಲಿ ಡೆಲಿಗೆಶನ್ ಹೋಗಬೇಕಿತ್ತು ಆಗ ಹೋಗಿಲ್ಲ. ಟ್ರೈನ್ ಹೋದ ಮೇಲೆ ಟಿಕೆಟ್ ತಗೊಂಡಂತೆ ಆಗಿದೆ. ಇವರು ನೀರಾವರಿ ತಜ್ಞರ ಭೇಟಿ ಮಾಡಿದ್ದಾರಾ? ಏನು ಮಾಡಿಲ್ಲ. ಸ್ಟಾಲಿನ್​​ಗೆ ಏನು ಬೇಸರ ಆಗಬಾರದು, ಅವರು ನಮ್ಮ ಅಣ್ಣ ಅಂತ ಕಾಂಗ್ರೆಸ್​ನವರು ನಡೆದುಕೊಳ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರ ಒಂದು ರೀತಿ ಶಾಪ

ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆ. ಫ್ರೀ.. ಫ್ರೀ.. ಫ್ರೀ.. ಅಂತ ಹೇಳಿ ಖಜಾನೆ ಖಾಲಿ ಆಗಿದೆ. ಗೈಡ್ ಲೈನ್ಸ್ ವೆಲ್ಯೂ 30% ಜಾಸ್ತಿ ಮಾಡಿದ್ದಾರೆ. ಸಿದ್ದರಾಮಯ್ಯಗೆ ನಾನು ಐದು ವರ್ಷ ಇರ್ತಿನಿ ಎನ್ನುವ ವಿಶ್ವಾಸ ಇಲ್ಲ. ಡಿ.ಕೆ ಶಿವಕುಮಾರ್​ಗೆ ತಾನು ಸಿಎಂ ಆಗ್ತೀನಿ ಎನ್ನುವ ವಿಶ್ವಾಸ ಇಲ್ಲ. ಡಿಸಿಎಂ ಮೂವರು ಬೇಕು ಅಂತ ಕೂಗಾಟ ಶುರುವಾಗಿದೆ. ಹೀಗೆ ಇವರೇ ಕಿತ್ತಾಟ ಮಾಡಿಕೊಳ್ತಾ ಇದ್ರೆ ಕಾವೇರಿ ಹೇಗೆ ಗೆಲ್ಲೋದು? ಈ ಸರ್ಕಾರ ಒಂದು ರೀತಿ ಶಾಪ ಎಂದು ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES