Sunday, January 19, 2025

ಗಣೇಶನ ಮುಂದೆ ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಯುವಕ ಸಾವು

ಬೆಂಗಳೂರು : ಗಣೇಶನ ಮುಂದೆ ಡ್ಯಾನ್ಸ್​ ಮಾಡುತ್ತಿದ್ದ ವೇಳೆ ಯುವಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂನಲ್ಲಿ ನಡೆದಿದೆ.

ಗಣೇಶ ಹಬ್ಬದ ಸಂಭ್ರಮದಲ್ಲಿದ್ದಾಗ ಗಣೇಶನ ಪೆಂಡಾಲ್​ನಲ್ಲಿ ಈ ಘಟನೆ ನಡೆದಿದೆ. ಪ್ರಸಾದ್ (26) ಸಾವನ್ನಪ್ಪಿರುವ ಯುವಕ ಎಂದು ತಿಳಿದುಬಂದಿದೆ.

ಮೃತ ಪ್ರಸಾದ್ ಯುವಕರ ಜೊತೆ ಡ್ಯಾನ್ಸ್​ ಮಾಡುತ್ತಿದ್ದನು. ಈ ವೇಳೆ ಹೃದಯಾಘಾತವಾಗಿದ್ದು, ದಿಢೀರನೆ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳದಲ್ಲಿದ್ದವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರಾದೃಷ್ಟವಶಾತ್ ಅಷ್ಟರಲ್ಲಾಗಲೇ ಯುವಕ ಮೃತಪಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

RELATED ARTICLES

Related Articles

TRENDING ARTICLES