Wednesday, January 22, 2025

ವೈದ್ಯರ ಮಹಾ ಎಡವಟ್ಟು; ಜನ್ಮ ಪಡೆದ ಮಗು ಅದಲು ಬದಲು

ಹುಬ್ಬಳ್ಳಿ : ವೈದ್ಯರ ಎಡವಟ್ಟನಿಂದ ಗಂಡು ಮಗು ಬದಲಾಗಿ ಪಾಲಕರಿಗೆ ಹೆಣ್ಣು ಮಗು ಕೊಟ್ಟಿರುವ ಘಟನೆ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಶಿವಪ್ಪ ಮತ್ತು ಮುತ್ತವ್ವ ಎಂಬುವರಿಗೆ ಇದೇ ತಿಂಗಳು 3 ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಮಗು ಜನಿಸಿದ ಬಳಿಕ ಮಗುವನ್ನು ವೈದ್ಯರು ಐಸಿಯುನಲ್ಲಿ ಇರಸಿದ್ದರು.

ಇದನ್ನು ಓದಿ : ಡೆತ್​ನೋಟ್ ಬರೆದು ವ್ಯಕ್ತಿ ಆತ್ಮಹತ್ಯೆ

ಮಗುವನ್ನು 15 ದಿನಗಳ ಬಳಿಕ ಕಿಮ್ಸ್ ಆಸ್ಪತ್ರೆಯ ವೈದ್ಯರು ಗಂಡು ಮಗು ಬದಲಾಗಿ ಪೋಷಕರಿಗೆ ಹೆಣ್ಣು ಮಗುವನ್ನು ಕೊಟ್ಟಿದ್ದರು. ಈ ವೈದ್ಯರು ಮಗುವನ್ನು ಅದಲು ಬದಲು ಮಾಡಿದ್ದ ವಿಚಾರ ತಿಳಿದು ಮಗುವಿನ ಪೋಷಕರು ಕಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES