Saturday, January 18, 2025

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ; ಪೊಲೀಸ್ ಕಾನ್ಸ್‌ಟೇಬಲ್ ಸಾವು

ಧಾರವಾಡ : ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪೋಲಿಸ್ ಕಾನ್ಸ್​ಟೇಬಲ್ ಸಾವನ್ನಪ್ಪಿರುವ ಘಟನೆ ತಾಲೂಕಿನ ಇಟ್ಟಿಗಟ್ಟಿ ಬಳಿ ನಡೆದಿದೆ.

ಹುಚ್ಚೇಶ ಹಿರೇಗೌಡ (37) ಮೃತ ಕಾನ್ಸ್​ಟೇಬಲ್. ಎಂಬುವವರು ಹಾಗೂ ಮಹಿಳಾ ಕಾನ್ಸ್​ಟೇಬಲ್ ಲಕ್ಷೀ ಇಬ್ಬರು ಛಬ್ಬಿ ಗಣೇಶೋತ್ಸವದ ಬಂದೋಬಸ್ತ್​ಗೆ ಹೋಗಿದ್ದರು. ಬಳಿಕ ಡ್ಯೂಟಿ ಮುಗಿಸಿ ಮರಳಿ ಬೈಕ್​ನಲ್ಲಿ ಬರುವ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಹುಚ್ಚೇಶ ಹಿರೇಗೌಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನು ಓದಿ : ನಾಡು,ನುಡಿ, ಜಲಕ್ಕಾಗಿ ಸದಾ ಚಿತ್ರರಂಗ ಮುಂದಿರಲಿದೆ; ಅಧ್ಯಕ್ಷ ಭಾಮಾ ಹರೀಶ್

ಇನ್ನೂ ಹಿಂಬದಿಯಲ್ಲಿ ಕೂತಿದ್ದ ಮಹಿಳಾ ಕಾನ್ಸ್‌ಟೇಬಲ್‌ಗೆ ಗಂಭೀರ ಗಾಯವಾಗಿದ್ದು, ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೋಲಿಸರು ಭೇಟಿ ನೀಡಿದ್ದರು.

RELATED ARTICLES

Related Articles

TRENDING ARTICLES