Wednesday, January 22, 2025

ಕುಡಿತದ ಬಾಜಿ ಕಟ್ಟಿ ಪ್ರಾಣ ಕಳೆದುಕೊಂಡ ವ್ಯಕ್ತಿ

ಹಾಸನ : ಮದ್ಯದ ಬಾಜಿ ಕಟ್ಟಿ 10 ಪ್ಯಾಕೇಜ್ ಮದ್ಯ ಕುಡಿದು, ವ್ಯಕ್ತಿ ಪ್ರಾಣ ಕಳೆದುಕೊಂಡಿರುವ ಘಟನೆ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ತಿಮ್ಮೇಗೌಡ (60) ಮೃತ ವ್ಯಕ್ತಿ. ಎಂಬ ವ್ಯಕ್ತಿ ಹಾಗೂ ದೇವರಾಜು ಎಂಬುವರು ಗ್ರಾಮದ ಬಸ್ ನಿಲ್ದಾಣದಲ್ಲಿ ಇಬ್ಬರ ನಡುವೆ ಮೂವತ್ತು ನಿಮಿಷದಲ್ಲಿ 90 ಎಂಲ್​ನ ಹತ್ತು ಪ್ಯಾಕೇಟ್ ಮದ್ಯ ಕುಡಿಯುವ ಚಾಲೆಂಜ್ ಮಾಡಿಕೊಂಡಿದ್ದರು.

ಇದನ್ನು ಓದಿ : ಸೋನಿಯಾ, ರಾಜೀವ ಗಾಂಧೀಜಿ ಅವರ ಫಲವಿದು ; ಮಾಜಿ ಸಚಿವೆ ಜಯಮಲಾ

ಬಳಿಕ ಈ ಇಬ್ಬರಿಗೂ ಕೃಷ್ಣೇಗೌಡ ಎಂಬುವವನು ಮದ್ಯದ ಪ್ಯಾಕೇಟ್​​ಗಳನ್ನು ನೀಡಿದ್ದನು. ಮೂವತ್ತು ನಿಮಿಷಗಳಲ್ಲಿ ಚಾಲೆಂಜ್ ಗೆಲ್ಲಲು, ಹೆಚ್ಚಾಗಿ ಮದ್ಯ ಸೇವಿಸಿದ್ದ ಹಿನ್ನೆಲೆ ತಿಮ್ಮೇಗೌಡ ರಕ್ತ ವಾಂತಿಯನ್ನು ಮಾಡಿಕೊಂಡು ಬಸ್ ನಿಲ್ದಾಣದಲ್ಲಿ ಬಿದ್ದಿದ್ದನು. ತಿಮ್ಮೇಗೌಡ ಅಸ್ವಸ್ಥವಾಗುತ್ತಿದ್ದಂತೆ ಸ್ಥಳದಿಂದ ಎಸ್ಕೇಪ್ ಆಗಿದ್ದ ದೇವರಾಜು ಮತ್ತು ಕೃಷ್ಣೇಗೌಡ.

ಬಳಿಕ ಅಸ್ವಸ್ಥನಾಗಿದ್ದ ತಿಮ್ಮೇಗೌಡನನ್ನು ಗ್ರಾಮಸ್ಥರು ಮನೆಗೆ ಕರೆತಂದು ಬಿಟ್ಟಿದ್ದರು. ಆದರೆ ವ್ಯಕ್ತಿಯ ಕುಟುಂಬದವರು ಹಬ್ಬ ಇದ್ದಿದ್ದರಿಂದ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಪರಿಣಾಮ ತಿಮ್ಮೇಗೌಡ ಸಾವನ್ನಪ್ಪಿದ್ದಾನೆ. ಈ ಘಟನೆ ಬಗ್ಗೆ ಮೃತನ ಮಗಳು ದೂರು ನೀಡಿದ್ದು, ಹೊಳೆನರಸೀಪುರ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಎಸ್ಕೇಪ್ ಆಗಿದ್ದ ದೇವರಾಜು ಮತ್ತು ಕೃಷ್ಣೇಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES