Wednesday, October 30, 2024

ಪದ್ಮನಾಭನಗರದಲ್ಲಿ ರಿವರ್ಸ್​​ ಆಪರೇಷನ್​ ಗೆ ಆರ್​.ಅಶೋಕ್​ ತಯಾರಿ!

ಬೆಂಗಳೂರು : ಇಲ್ಲಿನ ಪದ್ಮನಾಭ ನಗರದಲ್ಲಿ ಮಾಜಿ ಸಚಿವ ಆರ್​​.ಅಶೋಕ್ ಆಪ್ತರನ್ನು ಕಾಂಗ್ರೆಸ್​​ಗೆ ಸೇರಿಸಿಕೊಳ್ಳುವಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​ ಸಕ್ಸಸ್​ ಆದ ಹಿನ್ನೆಲೆ ಕಾಂಗ್ರೆಸ್​​ಗೆ ಶಾಕ್​ ನೀಡಲು ಕಮಲ ಕಲಿಗಳು ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ!

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಆಪರೇಷನ್​ ಕಮಲದ ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ಪದ್ಮನಾಭನಗರದ ನಾಲ್ಕಕ್ಕೂ ಹೆಚ್ಚು ಪ್ರಬಲ ಕೈ ಮುಖಂಡರನ್ನು ಬಿಜೆಪಿಗೆ ಸೆಳೆಯಲು
ಅರುಣ್​ ಸಿಂಗ್​​ ರೂಪುರೇಷೆ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.

ಈಗಾಗಲೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ತಮ್ಮ ಆಪ್ತರೊಂದಿಗೆ ಗುಪ್ತ್ ..ಗುಪ್ತ್ ಆಗಿ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದ್ದು. ಈ ನಡುವರೆ ಬಿಜೆಪಿ ಮಾಜಿ ಕಾರ್ಪೋರೇಟರ್ಸ್​ರನ್ನು ಕಾಂಗ್ರೆಸ್​ಗೆ ಕರೆ ತಂದಿದಕ್ಕೆ ಬಿಜೆಪಿ ನಾಯಕರು ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

RELATED ARTICLES

Related Articles

TRENDING ARTICLES