ಚಾಮರಾಜನಗರ : ಶವಸಂಸ್ಕಾರ ಮಾಡಲೆಂದು ಹೋಗಿದ್ದ ವೇಳೆ ಹೆಜ್ಜೇನು ದಾಳಿ ಮಾಡಿಯಿಂದ ಒರ್ವ ವ್ಯಕ್ತಿ ಸಾವು ಹಾಗೂ 15 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಕೊಂಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮೂಡಲ ಬೀದಿಯ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆ ಮೃತರ ಸಂಬಂಧಿಕರು ಹಾಗೂ ಕುಟುಂಬಸ್ಥರು ಶವಸಂಸ್ಕಾರಕ್ಕೆ ತೆರಳಿದ್ದ ವೇಳೆ ಶವಕ್ಕೆ ಪೂಜೆ ಸಲ್ಲಿಸಿ ಬೆಂಕಿ ಹಚ್ಚುತ್ತಿದ್ದಂತೆ ಮರದ ಮೇಲಿದ್ದ ಹೆಜ್ಜೇನುಗಳು ಬೆಂಕಿಯ ಜಳಕ್ಕೆ ಎದ್ದು ಬಿಟ್ಟಿದ್ದವು.
ಇದನ್ನು ಓದಿ : ಕಾರು ಮತ್ತು ಆಟೋ ನಡುವೆ ಡಿಕ್ಕಿ ; ಹಳ್ಳಕ್ಕೆ ಬಿದ್ದ ಕಾರು
ಬಳಿಕ ಹೆಜ್ಜೇನುಗಳು ಅಲ್ಲಿ ಇದ್ದ ಹಲವರ ಮೇಲೆ ದಾಳಿ ಮಾಡಿದೆ. ಹೆಜ್ಜೇನಿನ ದಾಳಿಯ ಪರಿಣಾಮ ಸುಮಾರು 15 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದೆ. ಬಳಿಕ ಸ್ಥಳದಿಂದ ಎಲ್ಲಾರು ಪರಾರಿಯಾಗಿದ್ದು, ಹೆಜ್ಜೇನು ದಾಳಿಗೆ ತೀವ್ರವಾಗಿ ಅಸ್ವಸ್ಥಗೊಂಡ ಚೆನ್ನಪ್ಪ (60) ಮೃತ ವ್ಯಕ್ತಿ. ಎಂಬ ವೃದ್ಧ ಆಸ್ಪತ್ರೆಗೆ ದಾಖಲಿಸಲು ಮುಂದಾದ ವೇಳೆ ದಾರಿ ಮದ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.
ಇನ್ನು ಗಾಯಳು ಜನರನ್ನು ಪಕ್ಕದ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.