Wednesday, January 22, 2025

ಬೆಂಗಳೂರಿನಾದ್ಯಂತ ಗೌರಿ-ಗಣೇಶ ಸಂಭ್ರಮ: ಮೂರ್ತಿಗಳ ವಿಸರ್ಜನೆಗೆ ಬಿಬಿಎಂಪಿ ಸಕಲ ಸಿದ್ದತೆ!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗೌರಿ-ಗಣೇಶ ಸಂಭ್ರಮ ಮನೆ ಮಾಡಿದ್ದು ನಗರದ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರಗಳು ನಡೆಯುತ್ತಿದೆ.

ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಅಲಂಕಾರ, ಅಭಿಷೇಕ, ಪೂಜೆ ನಡೆಯುತ್ತಿದ್ದು ಗೌರಿ ಗಣೇಶನ ದರ್ಶನಕ್ಕೆ ಬೆಳಗ್ಗೆಯಿಂದಲೇ ಭಕ್ತಾಧಿಗಳ ದಂಡು ಸಾಲುಗಟ್ಟಿ ನಿಂತಿದ್ದಾರೆ.
ಈ ಬಾರಿ ಗೌರಿ-ಗಣೇಶ ಹಬ್ಬ ಎರಡೂ ಒಂದೇ ದಿನ ಆಚರಣೆ ಮಾಡಲಾಗುತ್ತಿದ್ದು ಬೆಂಗಳೂರಿನಾದ್ಯಂತ ಗಣೇಶನ ಪ್ರತಿಮೆ ರಾರಾಜಿಸುತ್ತಿವೆ.

ಇದನ್ನೂ ಓದಿ: ಸಿರಾಜ್​ ಟೀಂ ಇಂಡಿಯಾದ ಬೆಂಕಿ ಚೆಂಡು: ಡಿಕೆ ಶಿವಕುಮಾರ್​ ಟ್ವೀಟ್!

ಗಣೇಶ ವಿಸರ್ಜನೆಗೆ ಬಿಬಿಎಂಪಿಯಿಂದ ಸಕಲ ತಯಾರಿ : 

ಬಿಬಿಎಂಪಿ ಪಾಲಿಕೆಯ 8 ವಲಯಗಳ 27 ವಿಧಾನಸಭಾ ಕ್ಷೇತ್ರಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ತಾತ್ಕಾಲಿಕ ಸಂಚಾರಿ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ. ಮೊಬೈಲ್‌ ಟ್ಯಾಂಕರ್‌ನಲ್ಲಿ ಮಣ್ಣಿನ ಪುಟ್ಟ ಮೂರ್ತಿಗಳ ವಿಸರ್ಜನೆ ಮತ್ತು ದೊಡ್ಡ ಮೂರ್ತಿಗಳ ವಿಸರ್ಜನೆಗೆ 12 ತಾತ್ಕಾಲಿಕ ಕಲ್ಯಾಣಿ ವ್ಯವಸ್ಥೆ ಮಾಡಲಾಗಿದೆ.

ಯಡಿಯೂರು, ಹೆಬ್ಬಾಳ, ಸ್ಯಾಂಕಿ ಟ್ಯಾಂಕ್‌ ಕೆರೆಗಳಲ್ಲಿ ವಿಸರ್ಜನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಇದಕ್ಕಾಗಿಯೇ ಕಲ್ಯಾಣಿಗಳಲ್ಲಿ ಹೂಳೆತ್ತಿ, ಬಣ್ಣವನ್ನ ಕೂಡ ಬಳಿಯಲಾಗಿದೆ, ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ಕಾರಣಕ್ಕೆ ಒಂದೊಂದು ಕಲ್ಯಾಣಿಗೆ 80 ಈಜುಗಾರರನ್ನ ಪಾಲಿಕೆ ನೇಮಿಸಿದೆ, ಕಲ್ಯಾಣಿ ಸುತ್ತಲೂ ಬ್ಯಾರಿಕೇಡ್ ಹಾಕಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES