Sunday, January 19, 2025

ದಾಖಲೆ ಹೊಸ್ತಿಲಲ್ಲಿ ರೋಹಿತ್.. ವಿರಾಟ್ ಕೊಹ್ಲಿ ಹಿಂದಿಕ್ಕಿದ ಗಿಲ್

ಬೆಂಗಳೂರು : ಭಾರತ ಕ್ರಿಕೆಟ್ ತಂಡದ ನಾಯಕ, ಹಿಟ್​ಮ್ಯಾನ್ ರೋಹಿತ್​ ಶರ್ಮಾ ಇಂದು ಮತ್ತೊಂದು ಮೈಲುಗಲ್ಲು ಸಾಧಿಸಲಿದ್ದಾರೆ.

ಶ್ರೀಲಂಕಾ ವಿರುದ್ಧದ ಏಷ್ಯಾಕಪ್​-2023 ಸರಣಿಯ ಫೈನಲ್ ಪಂದ್ಯದಲ್ಲಿ ಮುಂಬೈಕರ್ ರೋಹಿತ್ 250 ಏಕದಿನ ಪಂದ್ಯಗಳ ಮೈಲುಗಲ್ಲು ತಲುಪಲಿದ್ದಾರೆ. ಈ ಮೂಲಕ ದಿಗ್ಗಜರ ಸಾಲಿಗೆ ಶರ್ಮಾ ಹೆಸರು ಸೇರ್ಪಡೆಯಾಗಲಿದೆ.

ರೋಹಿತ್ ಶರ್ಮಾ ಇಲ್ಲಿಯವರೆಗೆ 249 ಏಕದಿನ ಪಂದ್ಯಗಳನ್ನು ಆಡಿರುವ ಹಿಟ್​ಮ್ಯಾನ್ 48.69 ಸರಾಸರಿಯಲ್ಲಿ 10,031 ರನ್​ ಗಳಿಸಿದ್ದಾರೆ. ರೋಹಿತ್ ಏಕದಿನದಲ್ಲಿ 3 ದ್ವಿಶತಕ ಸೇರಿದಂತೆ 30 ಶತಕ ಹಾಗೂ 51 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಗಿಲ್ಲಕ್ಕೋ ಶಿವ ಗಿಲ್ಲಕ್ಕೋ!

ಭಾರತದ ಯಂಗ್ ಗನ್ ಶುಭ್ಮನ್ ಗಿಲ್ ಈ ವರ್ಷ 6 ಶತಕಗಳನ್ನು ಸಿಡಿಸುವ ಮೂಲಕ ರನ್ ಮೆಷಿನ್ ವಿರಾಟ್​ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಈ ವರ್ಷದ ತಮ್ಮ 6ನೇ ಶತಕವನ್ನು ಪೂರೈಸಿದರು. ಗಿಲ್​ ತಮ್ಮ ಬೊಂಬಾಟ್​ ಆಟದ ಮೂಲಕ ಏಕದಿನ ರ್ಯಾಂಕಿಂಗ್​ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

RELATED ARTICLES

Related Articles

TRENDING ARTICLES