Thursday, December 26, 2024

73ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ಮೋದಿ : ಚಹಾ ಮಾರುತ್ತಿದ್ದವರು ಈ ಮಟ್ಟಕ್ಕೆ ಬೆಳೆದದ್ದೇ ಚರಿತ್ರೆ!

ನವದೆಹಲಿ : ನರೇಂದ್ರ ಮೋದಿ.. ದೇಶ ಕಂಡ ಅಪ್ರತಿಮ ರಾಜಕಾರಣಿ. ರಾಜಕೀಯ ಅಖಾಡದಲ್ಲಿ ಹೊಸ ಅಲೆ ಎಬ್ಬಿಸಿದ ಹೆಮ್ಮೆಯ ಪ್ರಧಾನಿ. ಅಂತರಾಷ್ಟ್ರೀಯ ಸಂಬಂಧದಿಂದ ಹಿಡಿದು, ಉದ್ಯಮ, ಡಿಜಿಟಲ್‌ ಇಂಡಿಯಾ, ವೈದ್ಯಕೀಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಭಾರತದ ಅಭಿವೃದ್ಧಿ ಮತ್ತು ದೇಶದ ಮುಂಚೂಣಿತನವನ್ನು ಬಯಸುತ್ತಿರುವ ಧೀಮಂತ ನಾಯಕ.

ದೇಶದ ಪ್ರಧಾನಿಯಾಗಿ ತಮ್ಮ ಎರಡನೇ ಅವಧಿಯ ಆಡಳಿತ ನಡೆಸುತ್ತಿರುವ ನರೇಂದ್ರ ದಾಮೋದರದಾಸ್ ಮೋದಿ ಅವರು ಇಂದು ತಮ್ಮ 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.  ಕೇವಲ ರಾಜಕೀಯ ಮಾತ್ರವಲ್ಲದೇ ಪ್ರಧಾನಿ ಮೋದಿ ಅವರ ಜೀವನ ಶೈಲಿ, ಅವರು ನಡೆದು ಬಂದ ಕಷ್ಟದ ಹಾದಿ, ಅವರ ಆರಂಭಿಕ ಜೀವನದ ಮೂಲಕ ಪ್ರಧಾನಿ ದೊಡ್ಡ ಸ್ಪೂರ್ತಿ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ.

ನರೇಂದ್ರ ಮೋದಿ 1950ರ ಸೆಪ್ಟೆಂಬರ್ 17ರಂದು ಜನಿಸಿದರು. ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಸಣ್ಣ ಪಟ್ಟಣವಾದ ವಡ್​ನಗರದಲ್ಲಿ ಜನಿಸಿದರು. ದಾಮೋದರದಾಸ್ ಮೋದಿ ಮತ್ತು ಹೀರಾಬಾ ಮೋದಿಯವರ ಆರು ಮಕ್ಕಳಲ್ಲಿ ನರೇಂದ್ರ ಮೋದಿ ಮೂರನೆಯವರು. ಜೀವನ ನಿರ್ವಹಣೆಗಾಗಿ ಮೋದಿಯವರ ತಂದೆ ದಾಮೋದರದಾಸ್ ಮೋದಿ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದರು. ನಂತರ ಪ್ರಧಾನಿ ಮೋದಿ ಅವರು ಸಹ ಅಪ್ಪನ ಕೆಲಸದಲ್ಲಿ ಜೊತೆಯಾಗಿದ್ದರು. ಬಳಿಕ ನಡೆದಿದ್ದು ಚರಿತ್ರೆಯೇ ಸರಿ!

ಸುದ್ದಿ ಓದಿದ್ದೀರಾ? : ವಿಶ್ವೇಶ್ವರಯ್ಯ ಜನ್ಮದಿನ : ‘ಪಾತ್ರೆ ಅಡ’ವಿಟ್ಟು ಮಗನಿಗೆ ಶಿಕ್ಷಣ ಕೊಡಿಸಿದ್ದ ತಾಯಿ!

3ನೇ ಬಾರಿ ಪ್ರಧಾನಿ ಪಟ್ಟ ಭದ್ರ?

ಚಹಾವನ್ನು ಮಾರುತ್ತಿದ್ದ ಮೋದಿ ಬಳಿಕ ಹಂತಹಂತವಾಗಿ ಬಿಜೆಪಿ ಪಕ್ಷ ಕೂಡಿಕೊಂಡರು. ಶಾಸಕರಾಗಿ, ಗುಜರಾತ್​ ಮುಖ್ಯಮಂತ್ರಿ ಆಗಿ, ದೇಶದ ಪ್ರಧಾನಮಂತ್ರಿಯಾಗಿ ಬೆಳೆದಿದ್ದಾರೆ. 2014ರಲ್ಲಿ ಎನ್​ಡಿಎ ಒಕ್ಕೂಟಕ್ಕೆ ಬಹುಮತ ಬಂದಾಗ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. 2019ರಲ್ಲಿ ಸತತ ಎರಡನೇ ಬಾರಿ ಪ್ರಧಾನಿ ಪಟ್ಟ ಭದ್ರ ಮಾಡಿಕೊಂಡಿದ್ದಾರೆ. ತಮ್ಮದೇ ಆದ ನಿರ್ಧಾರಗಳ ಮೂಲಕ ನರೇಂದ್ರ ಮೋದಿ ವಿಶ್ವದ ಗಮನ ಸೆಳೆದಿದ್ದಾರೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಎದುರಾಳಿಗಳನ್ನು ಮಣಿಸಿ ಸತತ 3ನೇ ಬಾರಿ ಪ್ರಧಾನಿ ಪಟ್ಟವೇರಲು ಮೋದಿ ದಾಪುಗಾಲಿಡುತ್ತಿದ್ದಾರೆ.

RELATED ARTICLES

Related Articles

TRENDING ARTICLES