Sunday, December 22, 2024

ಎರಡು ಭಾರಿ ಗಾತ್ರದ ಬಲೀನ್ ತಿಮಿಂಗಿಲಗಳ ಕಳೆಬರ ಪತ್ತೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿ ಕಡಲಧಾಮ ಪ್ರದೇಶದಲ್ಲಿ ಒಂದೇ ವಾರದ ಅಂತರದಲ್ಲಿ ಎರಡು ಭಾರಿ ಗಾತ್ರದ ಹಾಗೂ ಒಂದು ಮರಿ ತಿಮಿಂಗಿಲದ ಕಳೆಬರ ಪತ್ತೆಯಾಗಿದೆ.

ಸಪ್ತ ಸಾಗರಗಳನ್ನು ದಾಟಿ ಹೊನ್ನಾವರದ ಅರಬ್ಬೀ ವ್ಯಾಪ್ತಿಯಲ್ಲೇ ಮೂರು ತಿಮಿಂಗಿಲಗಳ ಕಳೆಬರ ಪತ್ತೆಯಾಗಿರುವುದು ಕಡಲ ಶಾಸ್ತ್ರಜ್ಞರ ಕಳವಳಕ್ಕೂ ಕಾರಣವಾಗಿದೆ. ಕಳೆದ ಭಾನುವಾರ ಹೊನ್ನಾವರದ ಮುಗಳಿ ಬೀಚ್‌ನಲ್ಲಿ ಸಮುದ್ರದಿಂದ ದಡಕ್ಕೆ ಸುಮಾರು 35 ಮೀ. ಉದ್ದದ ತಿಮಿಂಗಿಲ ಮೃತಪಟ್ಟು ಹಲವು ದಿನಗಳಾಗಿ ಕೊಳೆತ ಬಳಿಕ ಸಮುದ್ರದ ಅಲೆಗಳ ಹೊಡೆತಕ್ಕೆ ದಡಕ್ಕೆ ತೇಲಿ ಬಂದಿತ್ತು.

ಹೊನ್ನಾವರ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಳೆಬರಹವನ್ನ ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ನೀಡಿದ್ದರು.

RELATED ARTICLES

Related Articles

TRENDING ARTICLES