Friday, January 24, 2025

ದೇವೇಗೌಡ್ರು ಬಗ್ಗೆ ಮಾತನಾಡುವ ಮುಟ್ಟಾಳ ನಾನಲ್ಲ : ಚಲುವರಾಯಸ್ವಾಮಿ

ಮಂಡ್ಯ : ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರ‌ ಬಗ್ಗೆ ಮಾತನಾಡುವಷ್ಟು ಮುಟ್ಟಾಳ ನಾನಲ್ಲ ಎಂದು ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ ತಾಲ್ಲೂಕಿನ ಕೀಲಾರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ದೇವೇಗೌಡರ ಅಭಿವೃದ್ಧಿ, ಸಾಧನೆ ಬಗ್ಗೆ ಟೀಕೆ ಮಾಡುವಷ್ಟು ದೊಡ್ಡವನಲ್ಲ ಎಂದರು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜೊತೆ ಮಾತಾಡಿದ್ದಾರೆ. ಅದರ‌ ಜೊತೆ ರಾಜ್ಯದ ಸಂಸದರನ್ನು ಕರೆದುಕೊಂಡು ಹೋಗಿ ಸಿಎಂ ನೇತೃತ್ವದ ರಾಜ್ಯದ ನಿಯೋಗ ಪ್ರಧಾನಿ ಭೇಟಿಗೆ ಟೈಂ ಕೇಳಬೇಕಿತ್ತು ಎಂದು ಕುಟುಕಿದರು.

ಪಕ್ಷದ ಶಕ್ತಿ ಬೆಳಸೋಕೆ ಹೋಗವ್ರೆ

ಕಾವೇರಿ ಅಚ್ಚುಕಟ್ಟಿನ ರೈತರು ತೊಂದರೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ನಿಯೋಗಕ್ಕೆ ಸಮಯ ಕೊಡದಿದ್ದರೆ ಹೇಗೆ ಪ್ರಧಾನ ಮಂತ್ರಿಗಳೇ ಎನ್ನಬಹುದಿತ್ತು. ಹಾಗೆ ಕೇಳಿದ್ರೆ ನಮಗೆ ದೊಡ್ಡ ಶಕ್ತಿ ಬಂದಿರೋದು. ಪಕ್ಷದ ಶಕ್ತಿ ಬೆಳಸೋಕೆ ಅಮಿತ್ ಶಾ ಬಳಿ ಹೋಗವ್ರೆ. ಯಾಕೆ ಕಾವೇರಿ ವಿಚಾರ ಮಾತನಾಡಿಲ್ಲ ಅಂತ ಪ್ರಶ್ನೆ ಬರ್ತಿದೆ. ಅದನ್ನ ಬಿಟ್ಟು ಬೇರೆ ಏನು ದೂಷಣೆ ಮಾಡಲ್ಲ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES