Monday, December 23, 2024

ಇಂದು ಸರ್ವಪಕ್ಷಗಳ ಸಭೆ : ಅಧಿವೇಶನದ ಅಜೆಂಡಾಗಳ ಬಗ್ಗೆ ಚರ್ಚೆ?

ನವದೆಹಲಿ : ನಾಳೆಯಿಂದ ಐದು ದಿನಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರೆದಿರುವ ಸಂಸತ್ ವಿಶೇಷ ಅಧಿವೇಶನ ತೀವ್ರ ಕುತೂಹಲ ಕೆರಳಿಸಿದೆ. ಈ ಬೆನ್ನಲ್ಲೇ ಎಲ್ಲಾ ಪಕ್ಷಗಳಿಂದ ಅಭಿಪ್ರಾಯ, ಸಲಹೆಗಳನ್ನು ಪಡೆಯಲು ಇಂದು ಸಂಜೆ ಸರ್ವಪಕ್ಷ ನಾಯಕರೊಂದಿಗೆ ಸಭೆಯನ್ನು ಆಯೋಜಿಸಲಾಗಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆ ಮೇಲಿನ ಚರ್ಚೆಯನ್ನು ಸರ್ಕಾರ ಕಾರ್ಯಸೂಚಿಯಲ್ಲಿ ಸೇರಿಸಿದೆ. ಕಳೆದ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಪಟ್ಟಿ ಮಾಡಲಾದ ಕಾರ್ಯಸೂಚಿಯ ಭಾಗವಾಗಿರದ ಕೆಲವು ಹೊಸ ಶಾಸನಗಳು ಅಥವಾ ಇತರ ವಿಷಯಗಳನ್ನು ಸಂಸತ್ತಿನಲ್ಲಿ ಮಂಡಿಸುವ ವಿಶೇಷ ಅಧಿಕಾರವನ್ನು ಸರ್ಕಾರ ಹೊಂದಿದೆ.

‘ಸಂವಿಧಾನ ಸಭೆ’ಯಿಂದ ಆರಂಭಿಸಿ ಸಂಸತ್ತಿನ 75 ವರ್ಷಗಳ ಪಯಣ ಕುರಿತ ವಿಶೇಷ ಚರ್ಚೆಯೇ ಸರ್ಕಾರ ಪಟ್ಟಿ ಮಾಡಲಾದ ಪ್ರಮುಖ ಅಜೆಂಡಾವಾದರೂ ಸಾಮಾನ್ಯವಾಗಿ ಅಧಿವೇಶನ ಇಲ್ಲದೆ ಬೇರೆ ಸಂದರ್ಭದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನ ಅಚ್ಚರಿಗೆ ಕಾರಣವಾಗಿದೆ.

ಹಳೆ ಕಟ್ಟಡದಲ್ಲಿ ಅಧಿವೇಶನ?

ಈ ಸಭೆಗೆ ಈಗಾಗಲೇ ಎಲ್ಲ ನಾಯಕರಿಗೆ ಇ-ಮೇಲ್​ ಮೂಲಕ ಸಂದೇಶ ಕಳುಹಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಮೊದಲ ದಿನದ ಅಧಿವೇಶನ ಹಳೆಯ ಕಟ್ಟಡದಲ್ಲಿದ್ದು, ಬಳಿಕ ಮಂಗಳವಾರದಂದು ಹೊಸ ಸಂಸತ್​ ಭವನದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

RELATED ARTICLES

Related Articles

TRENDING ARTICLES