Sunday, December 22, 2024

ಗಣೇಶ ವಿಸರ್ಜನೆ ಸ್ಥಳ ಪತ್ತೆಗೆ QR ಕೋಡ್ : ಈ ಸ್ಥಳಗಳಲ್ಲಿ ಮಾತ್ರ ವಿಸರ್ಜನೆಗೆ ಅವಕಾಶ

ಬೆಂಗಳೂರು : ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬಿಬಿಎಂಪಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಗಣೇಶ ವಿಸರ್ಜನೆ ಸ್ಥಳ ಪತ್ತೆಗೆ ಕ್ಯು ಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 39 ಕೆರೆ ಅಂಗಳ (ತಾತ್ಕಾಲಿಕ ಕಲ್ಯಾಣಿ), 418 ತಾತ್ಕಾಲಿಕ  ಮೊಬೈಲ್ ಟ್ಯಾಂಕ್ ಗಳ ವ್ಯವಸ್ಥೆಯನ್ನು ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿ ಮಾಡಲಾಗಿದೆ.

ವ್ಯವಸ್ಥೆಯ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅದರ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ವೆಬ್ ಸೈಟ್ https://apps.bbmpgov.in/ganesh2023/ ನಲ್ಲಿ ಅಥವಾ ಬಿಬಿಎಂಪಿ ಸಹಾಯವಾಣಿ 1533ಗೆ ಕರೆಮಾಡಿ ವಿವರವನ್ನು ಪಡೆಯಬಹುದಾಗಿದೆ.

ವಲಯವಾರು ಗಣೇಶ ವಿಸರ್ಜನಾ ವ್ಯವಸ್ಥೆ

  • ಪೂರ್ವ ವಲಯ : 88 ತಾತ್ಕಾಲಿಕ ಮೊಬೈಲ್ ಟ್ಯಾಂಕರ್, 1 ಕೆರೆ ಅಂಗಳ ತಾತ್ಕಾಲಿಕ ಕಲ್ಯಾಣಿ
  • ಪಶ್ಚಿಮ : 6 ತಾತ್ಕಾಲಿಕ ಮೊಬೈಲ್ ಟ್ಯಾಂಕರ್, 1 ಕೆರೆ ಅಂಗಳ ತಾತ್ಕಾಲಿಕ ಕಲ್ಯಾಣಿ
  • ದಕ್ಷಿಣ : 4 ತಾತ್ಕಾಲಿಕ ಮೊಬೈಲ್ ಟ್ಯಾಂಕರ್, 2 ಕೆರೆ ಅಂಗಳ ತಾತ್ಕಾಲಿಕ ಕಲ್ಯಾಣಿ
  • ಮಹದೇವಪುರ : 4 ತಾತ್ಕಾಲಿಕ ಮೊಬೈಲ್ ಟ್ಯಾಂಕರ್, 14 ಕೆರೆ ಅಂಗಳ ತಾತ್ಕಾಲಿಕ ಕಲ್ಯಾಣಿ
  • ದಾಸರಹಳ್ಳಿ : 19 ತಾತ್ಕಾಲಿಕ ಮೊಬೈಲ್ ಟ್ಯಾಂಕರ್, 1 ಕೆರೆ ಅಂಗಳ ತಾತ್ಕಾಲಿಕ ಕಲ್ಯಾಣಿ
  • ಬೊಮ್ಮನಹಳ್ಳಿ : 5 ತಾತ್ಕಾಲಿಕ ಮೊಬೈಲ್ ಟ್ಯಾಂಕರ್, 4 ಕೆರೆ ಅಂಗಳ ತಾತ್ಕಾಲಿಕ ಕಲ್ಯಾಣಿ
  • ಆರ್ ಆರ್ ನಗರ : 9 ತಾತ್ಕಾಲಿಕ ಮೊಬೈಲ್ ಟ್ಯಾಂಕರ್, 6 ಕೆರೆ ಅಂಗಳ ತಾತ್ಕಾಲಿಕ ಕಲ್ಯಾಣಿ
  • ಯಲಹಂಕ : 4 ತಾತ್ಕಾಲಿಕ ಮೊಬೈಲ್ ಟ್ಯಾಂಕರ್, 10 ಕೆರೆ ಅಂಗಳ ತಾತ್ಕಾಲಿಕ ಕಲ್ಯಾಣಿ
  • ಒಟ್ಟು : 41 ತಾತ್ಕಾಲಿಕ ಮೊಬೈಲ್ ಟ್ಯಾಂಕರ್, 39 ಕೆರೆ ಅಂಗಳ ತಾತ್ಕಾಲಿಕ ಕಲ್ಯಾಣಿಗಳು

RELATED ARTICLES

Related Articles

TRENDING ARTICLES