Thursday, December 19, 2024

ಸಿದ್ದರಾಮಯ್ಯ ‘ಕುಂಭಕರ್ಣ’, ವೀರನೂ ಅಲ್ಲ.. ಶೂರನೂ ಅಲ್ಲ.. : ಬಿಜೆಪಿ

ಬೆಂಗಳೂರು : ಬರ ಪರಿಹಾರಕ್ಕೆ ಕೇಂದ್ರ ನಿಯಮ ಅಡ್ಡಿಯಾಗುತ್ತಿದೆ ಹಾಗೂ ಮಾನದಂಡ ಬದಲಿಸದಿದ್ದರೆ ಪರಿಹಾರ ಕಾರ್ಯ ಅಸಾಧ್ಯ ಎಂದು ಮೋದಿ ಕಡೆ ಬೊಟ್ಟು ಮಾಡಿರುವ ಸಿಎಂ ಸಿದ್ದರಾಮಯ್ಯರನ್ನು ಬಿಜೆಪಿ ಲೇವಡಿ ಮಾಡಿದೆ.

ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದಲ್ಲಿ ಬರ ನಿರ್ವಹಣೆ ಮಾಡಲು ಕೈಲಾಗದಿದ್ದಾರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಛೇಡಿಸಿದೆ.

ಕುಣಿಯಲಾರದವಳು ನೆಲ ಡೊಂಕೆಂದಳಂತೆ. ಅಯ್ಯಯ್ಯೋ..! ಬರಗಾಲ ಬಂತೆಂದು ರಾಜ್ಯದ ರೈತರು ಬಾಯಿ ಬಡಿದುಕೊಂಡರು. ನಿಮ್ಮ ಅಸಮರ್ಥ ಆಡಳಿತಕ್ಕೆ ಬೇಸತ್ತು ರೈತರು ಸರಣಿ ಆತ್ಮಹತ್ಯೆಗೆ ಶರಣಾದರು. ಆದರೆ, ಮುಖ್ಯಮಂತ್ರಿ ಎನಿಸಿಕೊಂಡ ಸಿದ್ದರಾಮಯ್ಯ  ಅವರು ಕುಂಭಕರ್ಣನಂತೆ ಗಾಢ ನಿದ್ದೆಗೆ ಜಾರಿದ್ದು ಬಿಟ್ಟರೆ ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಿದೆ.

ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದು ಬಿಟ್ಟು ನಿಮಗೆ ಬೇರೆ ಕೆಲಸಗಳೇನಾದರೂ ಗೊತ್ತಿದೆಯೇ? ಕೊಟ್ಟ ಕುದುರೆಯನ್ನು ಏರಲಾಗದವನು ವೀರನೂ ಅಲ್ಲ ಶೂರನೂ ಅಲ್ಲ ಎಂದು ಟೀಕಿಸಿದೆ.

RELATED ARTICLES

Related Articles

TRENDING ARTICLES