Wednesday, December 25, 2024

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಯಾದಗಿರಿ : ಲಾಡ್ಜ್​ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನಗರದ ಆಶ್ರಯ ಲಾಡ್ಜ್​ನಲ್ಲಿ ನಡೆದಿದೆ.

ನಿನ್ನೆ ಸಂಜೆ ಆಶ್ರಯ ಲಾಡ್ಜ್​ಗೆ ಬಂದಿದ್ದ ವ್ಯಕ್ತಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.  ಸ್ಥಳಕ್ಕೆ ವ್ಯಕ್ತಿಯ ಕುಟುಂಬಸ್ಥರು ಆಗಮಿಸಿದ್ದು, ವ್ಯಕ್ತಿಯ ನೇಣು ಬಿಗಿದಿರುವ ಸ್ಥಿತಿಯನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನು ಓದಿ : ಹಾಸ್ಟಲ್ ಕಾವಲುಗಾರನಿಂದ ಹಾಸ್ಟಲ್ ವಿದ್ಯಾರ್ಥಿಗೆ ಥಳಿತ

ಬಳಿಕ ಪೋಲಿಸರಿಗೆ ಮಾಹಿತಿ ತಿಳಿದಿದ್ದು, ಯಾದಗಿರಿ ನಗರ ಪೋಲಿಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ವ್ಯಕ್ತಿಯ ಈ ಸಾವಿಗೆ ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ.

RELATED ARTICLES

Related Articles

TRENDING ARTICLES