Monday, December 23, 2024

ವರ್ಕೌಟ್ ಮಾಡುವಾಗ ಹೃದಯಾಘಾತದಿಂದ ಯುವಕ ಸಾವು

ಬೆಂಗಳೂರು : ಜಿಮ್​ನಲ್ಲಿ ವರ್ಕೌಟ್​ ಮಾಡುವ ವೇಳೆ ಯುವಕನೊಬ್ಬ ದಿಢೀರನೆ ​ ಕುಸಿದು ಬಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಉತ್ತರಪ್ರದೇಶದ ಘಾಜಿಯಾಬಾದ್​ನಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಸಿದ್ಧಾರ್ಥ್​ ಕುಮಾರ್​ ಸಿಂಗ್​ (19) ಮೃತ ದುರ್ದೈವಿ. ಘಾಜಿಯಾಬಾದ್​ನ ಸರಸ್ವತಿ ವಿಹಾರದಲ್ಲಿರುವ ಜಿಮ್​ನಲ್ಲಿ ವರ್ಕೌಟ್​ ಮಾಡುವ ವೇಳೆ ಮೃತಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಮೃತ ಸಿದ್ಧಾರ್ಥ್​ ಕುಮಾರ್​ ಸಿಂಗ್​ ಅವರು ಥ್ರೆಡ್​ಮಿಲ್​ನಲ್ಲಿ ವ್ಯಾಯಾಮ ಮಾಡುವಾಗ ಹಠಾತ್​ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಮತ್ತಿಬ್ಬರು ಕೂಡಲೇ ಅವರ ರಕ್ಷಣೆಗೆ ಧಾವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರು ಯುವಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಇದೇ ಹೃದಯಾಘಾತಕ್ಕೆ ಕಾರಣ

ಕಳೆದ ಕೆಲ ದಿನಗಳಿಂದ ಜಿಮ್​ನಲ್ಲಿ ವರ್ಕೌಟ್​ ಮಾಡುವ ವೇಳೆ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅತಿಯಾದ ವ್ಯಾಯಾಮ, ಹೆಚ್ಚಿನ ಒತಡ ​​ಸೇರಿದಂತೆ ಇತರೆ ಕಾರಣಗಳಿಂದ ಹೃದಯಾಘಾತ ಸಂಭವಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES