ಮೈಸೂರು: ಬಸವಮಾರ್ಗ ಫೌಂಡೇಶನ್ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ, 40 ಲಕ್ಷ ರೂ. ವಂಚನೆ ಮಾಡಿ ಆರೋಪಿ ಪರಾರಿಯಾಗಿರುವ ಘಟನೆ ಹೆಬ್ಬಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಡ್ಯ ಮೂಲದ ವಿಶಾಲ್ ರಾಜ್ ವಂಚನೆ ಮಾಡಿದ ಆರೋಪಿ. ಬಸವಮಾರ್ಗ ಫೌಂಡೇಶನ್ ವ್ಯಸನ ಮುಕ್ತವಾಗಿಸುವ ಕೇಂದ್ರವಾಗಿದೆ. ಈ ಕೇಂದ್ರಕ್ಕೆ 2022ರ ಆಗಸ್ಟ್ನಲ್ಲಿ ವ್ಯಸನ ಮುಕ್ತನಾಗಲು ವಿಶಾಲ್ ರಾಜ್ ಬಂದಿದ್ದನು.
ಇದನ್ನೂ ಓದಿ: ಜೈಲಿನಿಂದ ಪುನೀತ್ ಕೆರೆಹಳ್ಳಿ ಬಿಡುಗಡೆ!
ವ್ಯಸನ ಮುಕ್ತನಾದ ಬಳಿಕ ವಿಶಾಲ್ ರಾಜ್ ಇಲ್ಲಿಯೇ ಕೆಲಸ ಕೊಡಿ ಎಂದು ಫೌಂಡೇಶನ್ ಮಾಲೀಕರ ಬಳಿ ಕೇಳಿಕೊಂಡಿದ್ದನು. ಇದೇ ವೇಳೆ ಫೌಂಡೇಶನ್ನ ಅಕೌಂಟೆಂಟ್ ಕೆಲಸ ಬಿಟ್ಟಿದ್ದನು. ಈ ಜಾಗಕ್ಕೆ ವಿಶಾಲ್ ರಾಜ್ನನ್ನು ನೇಮಕ ಮಾಡಿಕೊಳ್ಳಲಾಯಿತು. ಬಳಿಕ ವಿಶಾಲ್ ರಾಜ್ ಹಳೆ ಅಕೌಂಟ್ ಗೋಕುಲ್ ರಾಜ್ನಿಂದ ನೆರವು ಪಡೆದು 2022ರ ಜೂನ್ 17 ರಿಂದ ಜುಲೈ 24 ರ ವರೆಗೆ 37.90 ಲಕ್ಷ ರೂ. ವರ್ಗಾವಣೆ ಮಾಡಿದ್ದಾನೆ.
ಕೆಲ ದಿನಗಳ ನಂತರ ಫೌಂಡೇಶನ್ ಮಾಲೀಕರಿಗೆ ಅನುಮಾನ ಬಂದು ಅಕೌಂಟ್ ಪರಿಶೀಲಿಸಿದ ವೇಳೆ ವಂಚನೆ ಬೆಳಕಿಗೆ ಬಂದಿದೆ. ಟ್ರಸ್ಟಿ ಬಸವರಾಜ್ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ವಿಶಾಲ್ ರಾಜ್ ಎಸ್ಕೇಪ್ ಆಗಿದ್ದಾನೆ.