ಬೆಂಗಳೂರು : ಮೂರು ಡಿಸಿಎಂ ಸ್ಥಾನ ರಚನೆ ಮಾಡಬೇಕು ಎಂದಿರುವ ಸಚಿವ ಕೆ.ಎನ್ ರಾಜಣ್ಣ ಅವರ ಹೇಳಿಕೆಯನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಸಮರ್ಥನೆ ಮಾಡಿಕೊಂಡರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ರಾಜಣ್ಣ ಕೇಳೋದ್ರಲ್ಲಿ ತಪ್ಪೇನಿಲ್ಲ. ಮುಖ್ಯಮಂತ್ರಿಗೂ.. ಹೈಕಮಾಂಡ್ಗೂ ಅವರೇ ತಿಳಿಸಬೇಕು. ಅವರ ವೈಯಕ್ತಿಕ ಅಭಿಪ್ರಾಯ, ಅವರ ಅನಿಸಿಕೆ ಅವರೇ ಹೇಳಬೇಕು ಎಂದು ಹೇಳಿದರು.
ಡಿಸಿಎಂ ಮಾಡಬೇಕು ಎಂಬ ಅವರ ಉದ್ದೇಶ ಒಳ್ಳೆಯದೇ.. ಲೋಕಸಭಾ ಚುನಾವಣೆ ಮುಂಚೆ ಸಮುದಾಯಗಳಿಗೆ ಡಿಸಿಎಂ ಮಾಡಬೇಕು ಅಂತ ರಾಜಣ್ಣ ಹೇಳಿದ್ದಾರೆ. ತೀರ್ಮಾನ ಮಾಡುವವರು, ಬಿಡುವವರು ಎಐಸಿಸಿ ನಾಯಕರು. ಡಿಸಿಎಂ ಸ್ಥಾನ ಮಾಡುವ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿರುವುದು ಎಂದು ತಿಳಿಸಿದರು.
ಚೈತ್ರಾ ಸ್ವಲ್ಪ ಡ್ರಾಮಾ ಮಾಡಿದ್ರು
ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಕುರಿತು ಮಾತನಾಡಿ, ನಿನ್ನೆ ಚೈತ್ರಾ ಕುಂದಾಪುರ ವಿಚಾರಣೆ ವೇಲೆ ಸ್ವಲ್ಪ ಡ್ರಾಮಾ ಎಲ್ಲ ನಡೆದಿತ್ತಲ್ಲ.. ಇಲಾಖೆಯವರು ಹ್ಯಾಂಡಲ್ ಮಾಡ್ತಾ ಇದ್ದಾರೆ. ಸಂಪೂರ್ಣ ತನಿಖೆ ಆದ್ಮೇಲೆ ಎಲ್ಲ ವಿಚಾರ ನಿಮಗೆ ತಿಳಿಸುತ್ತೇವೆ. ತನಿಖೆ ಎಲ್ಲ ಹೊರಬರಲಿ, ಯಾರು ಯಾರದು ಲಿಂಕ್ ಇದೆ? ಅವರೇ ಹಣ ತೆಗೆದುಕೊಂಡಿದ್ರಾ? ಬೇರೆಯವರಿಗೆ ಕೊಟ್ಟಿದ್ರಾ? ಎಲ್ಲ ತನಿಖೆ ಬಳಿಕ ಹೊರ ಬರುತ್ತೆ. ಸ್ವಾಮೀಜಿಯನ್ನು ಹುಡುಕ್ತಾ ಇದ್ದಾರೆ, ಇನ್ನೂ ಸಿಕ್ಕಿಲ್ಲ ಎಂದು ಮಾಹಿತಿ ನೀಡಿದರು.