ಬೆಂಗಳೂರು : ಸ್ಯಾಂಡಲ್ವುಡ್ನಲ್ಲೀಗ ಚುನಾವಣಾ ಜ್ವರ ಶುರುವಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಇದೇ ಸೆಪ್ಟೆಂಬರ್ 23ಕ್ಕೆ ನಡೆಯಲಿದ್ದು, ಅಧ್ಯಕ್ಷ ಪಟ್ಟಕ್ಕಾಗಿ ಭಾರಿ ಫೈಟ್ ಏರ್ಪಟ್ಟಿದೆ. ಎಕ್ಸ್ಕ್ಯೂಸ್ಮೀ ಖ್ಯಾತಿಯ ನಿರ್ಮಾಪಕ ಎನ್.ಎಂ ಸುರೇಶ್ ಕಣಕ್ಕೆ ಧುಮುಕಿದ್ದು, ಹೆಚ್ಚಿನ ನಿರ್ಮಾಪಕರು ಇವರಿಗೆ ಜೈ ಎಂದಿದ್ದಾರೆ.
ಫಿಲಂ ಚೇಂಬರ್ ಇತ್ತೀಚಿಗೆ ತನ್ನ ಮಹತ್ವ ಕಳೆದುಕೊಂಡಿದೆ. ಚಿತ್ರೋದ್ಯಮದ ಮೇಲೆ ಹಿಡಿತವೇ ಇಲ್ಲ. ಚಿತ್ರರಂಗದ ಒಡೆದ ಗೂಡಾಗಿದೆ ಅಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಾರಿಯ ಫಿಲಂ ಚೇಂಬರ್ ಚುನಾವಣೆಯಲ್ಲಿ ಇದಕ್ಕೆ ಉತ್ತರ ನೀಡುವಂತೆ ಸಮರ್ಥರು ಆಯ್ಕೆ ಆಗಬೇಕು ಎಂಬ ನಿರೀಕ್ಷೆಯನ್ನೂ ಚಿತ್ರರಂಗದ ಹಿರಿಯರು ಇಟ್ಟುಕೊಂಡಿದ್ದಾರೆ.
ಅಂತೆಯೇ ಈ ಬಾರಿ ಹೆಚ್ಚಿನ ಹಿರಿಯ ನಿರ್ಮಾಪಕರು ಬೆಂಬಲಿಸ್ತಾ ಇರೋದು ನಿರ್ಮಾಪಕ ಎನ್.ಎಂ ಸುರೇಶ್ ರನ್ನ. ಎಕ್ಸ್ಕ್ಯೂಸ್ ಮೀ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುರೇಶ್ ಚಪ್ಪಾಳೆ, ಕಾರಂಜಿ, ಚೆಲುವೆಯೇ ನಿನ್ನ ನೋಡಲು ಸೇರಿದಂತೆ ಅನೇಕ ಸದಭಿರುಚಿಯ ಸಿನಿಮಾಗಳನ್ನ ನಿರ್ಮಿಸಿದವರು. ಇನ್ನೂ ಫಿಲಂ ಫೆಡರೇಷನ್ ಉಪಾಧ್ಯಕ್ಷರೂ ಆಗಿರೋ, ಸುರೇಶ್ ಅನೇಕ ವರ್ಷಗಳಿಂದ ವಾಣಿಜ್ಯ ಮಂಡಳಿಯಲ್ಲಿ ನಾನಾ ಜವಾಬ್ದಾರಿಗಳನ್ನ ನಿರ್ವಹಿಸಿದ್ದಾರೆ. ಇತ್ತೀಚಿಗೆ ಫಿಲಂ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸುರೇಶ್, ಚಿತ್ರೋದ್ಯಮದ ಸೇವೆ ಮಾಡುವ ಉತ್ಸಾಹದಲ್ಲಿದ್ದಾರೆ.
ಸುರೇಶ್ಗೆ ಸಾರಾ ಗೋವಿಂದು ಸಾಥ್
ಎನ್.ಎಂ ಸುರೇಶ್ ಈ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಅಂತ ನಿರ್ಧರಿಸಿ ಅನೇಕ ಹಿರಿಯ ನಿರ್ಮಾಪಕರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಹಿರಿಯ ನಿರ್ಮಾಪಕರ ಸಾ ರಾ ಗೋವಿಂದು ಕೂಡ ಸುರೇಶ್ ಅವರಿಗೆ ಸಾಥ್ ಕೊಟ್ಟಿದ್ದಾರೆ. ಇದೇ ಸೆಪ್ಟೆಂಬರ್ 23ಕ್ಕೆ ಫಿಲಂ ಚೇಂಬರ್ ಚುನಾವಣೆ ನಡೆಯಲಿದ್ದು, ಸೂಕ್ತ ನಾಯಕರನ್ನ ಆಯ್ಕೆ ಮಾಡೋದಕ್ಕೆ ಕನ್ನಡ ಚಿತ್ರೋದ್ಯಮ ಸಿದ್ದವಾಗಿದೆ.