Sunday, December 22, 2024

RSS ತತ್ವದಿಂದ ಯಾರು ಉದ್ದಾರ ಆಗಿದ್ದಾರೆ ಹೇಳಿ? : ಪ್ರಿಯಾಂಕ್ ಖರ್ಗೆ

ಕಲಬುರಗಿ : RSS ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್​ಎಸ್​ಎಸ್​(RSS) ತತ್ವದಿಂದ ಯಾರು ಉದ್ದಾರ ಆಗಿದ್ದಾರೆ ಹೇಳಿ? ಎಂದು ಪ್ರಶ್ನೆ ಮಾಡಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್​ಎಸ್​ಎಸ್​ಗೆ ದೇಶ ಭಕ್ತಿಯೂ ಇಲ್ಲ, ದೇಶ ಪ್ರೇಮವೂ ಇಲ್ಲ ಎಂದು ಕುಟುಕಿದ್ದಾರೆ.

ಈ ಹಿಂದೆ ಸರ್ಕಾರದ ಕೆಲವು ಕಚೇರಿಗಳು ಆರ್​ಎಸ್​ಎಸ್​ ಶಾಖೆಗಳಾಗಿದ್ದವು. ಆ ಶಾಖಾ ಪೀಠಗಳನ್ನೆಲ್ಲಾ ಒಂದೊಂದಾಗಿ ಮುಚ್ಚಿಸುತ್ತಿದ್ದೇವೆ. ಯಾವ ಉದ್ದೇಶಕ್ಕೆ ಸರ್ಕಾರಿ ಕಚೇರಿಗಳು ಸ್ಥಾಪನೆ ಆಗಿವೆಯೋ, ಅದೆ ಉದ್ದೇಶದ ಕೆಲಸಗಳು ನಡೆಯಬೇಕು. ಪಿಡಿಓ ಕಚೇರಿ ಹೋಗಿ ಕಾಂಗ್ರೆಸ್ ಕಚೇರಿ ಆದ್ರೆ ಸರಿಯಾಗಿರುತ್ತಾ? ಎಲ್ಲವೂ ಕಾನೂನು ಬದ್ದವಾಗಿ ನಡೆಯಬೇಕು ಎಂದು ಹೇಳಿದ್ದಾರೆ.

ಕಲಬುರಗಿ ಕೇಂದ್ರೀಯ ವಿವಿ RSS ಪ್ರಚಾರ ಕುರಿತು ಮಾತನಾಡಿದ ಅವರು, ಕಲಬುರಗಿ ಕೇಂದ್ರೀಯ ವಿವಿ ಆರ್.ಎಸ್.ಎಸ್ ಪ್ರಚಾರ ನಡೆಯುತ್ತಿದೆ. ಇದಕ್ಕೆ ನಾನು ಅವಕಾಶ ಕೊಡಲಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES