Wednesday, January 22, 2025

ರೈಲು ಬೋಗಿಗಳಲ್ಲಿ ಇಲಿಗಳ ಕಾಟ: ಹೈರಾಣಾದ ಪ್ರಯಾಣಿಕರು!

ವಿಜಯಪುರ : ರೈಲು ಬೋಗಿಗಳಲ್ಲಿ ಸ್ವಚ್ಚತೆ ಕೊರತೆಯ ಕಾರಣದಿಂದ ಹೈದರಬಾದ್​ – ವಿಜಯಪುರ ಎಕ್ಸ್​ಪ್ರೆಸ್​ ರೈಲಿನಲ್ಲಿ ಇಲಿಗಳ ಕಾಟ ಹೆಚ್ಚಾಗಿ ಪ್ರಯಾಣಿಕರ ನಿದ್ದೆಗೆಡಿಸಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯಪುರ ನಿಲ್ದಾಣದಲ್ಲಿ ಹೈದರಾದ್​ – ವಿಜಯಪುರ ರೈಲಿನ ಜನರಲ್​ ಬೋಗಿಗಳನ್ನು ಇಲ್ಲಿನ ಸಿಬ್ಬಂದಿಗಳು ಸರಿಯಾಗಿ ಸ್ವಚ್ಚಗೊಳಿಸದ ಕಾರಣ ಇಲಿ ಮತ್ತು ಹೆಗ್ಗಣಗಳು ಬೋಗಿಗಳಲ್ಲಿನ ಪ್ರಯಾಣಿಕರ ಭಯವೇ ಇಲ್ಲದೇ ಬಿಂದಾಸ್ ಆಗಿ ಓಡಾಡುತ್ತಿವೆ.

ಇದನ್ನೂ ಓದಿ: ಇಂದು ಸಿಎಂ ಸಿದ್ದರಾಮಯ್ಯ ತೆಲಂಗಾಣಕ್ಕೆ: ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗಿ!

ಪ್ರಯಾಣಿಕರ ಬ್ಯಾಗ್ ಹಾಗೂ ಇತರೇ ವಸ್ತುಗಳು ಸೇರಿದಂತೆ ಚೀಲದಲ್ಲಿನ ಆಹಾರ ಪದಾರ್ಥಗಳನ್ನು ಕಚ್ಚಿ ತಿಂದು ಹಾಕುತ್ತಿದ್ದು ಈ ಭಾಗದಲ್ಲಿ ದಿನ ನಿತ್ಯ ವಿವಿಧ ರೈಲುಗಳಲ್ಲಿ ಇಲಿಗಳ ಕಾಟಕ್ಕೆ ಪ್ರಯಾಣಿಕರು ಬೇಸತ್ತಿದ್ದಾರೆ. ಇಲಿಗಳ ಕಾಟ ತಪ್ಪಿಸಿ ಸುರಕ್ಷಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸಬೇಕು ಎಂದು ರೈಲ್ವೆ ಇಲಾಖೆಗೆ ರೈಲು ಪ್ರಯಾಣಿಕರ ಆಗ್ರಹಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES