Thursday, December 19, 2024

ರಾಜ್ಯ ಸರ್ಕಾರದ ಹುಚ್ಚಾಟಕ್ಕೆ ಸಂಕಷ್ಠಕ್ಕೆ ಸಿಲುಕಿದ ರೈತರು

ದಾವಣಗೆರೆ : ಏಕಾಏಕಿ ಭದ್ರಾ ಜಲಾಶಯದ ನೀರನ್ನು ನಿಲ್ಲಿಸಿದ್ದ ಹಿನ್ನೆಲೆ ರೈತರ ಬೆಳೆಗಳು ನಾಶವಾಗಿದ್ದು ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಾವರಿ ಇಲಾಖೆಯವರು ಭದ್ರಾ ಜಲಾಶಯದಿಂದ 100 ದಿನ ನೀರು ಹರಿಸಲು ಆದೇಶವನ್ನು ಹೊರಡಿಸಿದ್ದರು. ಈ ಹಿನ್ನೆಲೆ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 62 ಸಾವಿರ ಹೆಕ್ಟೇರೆ ಭತ್ತವನ್ನು ರೈತರು ನಾಟಿ ಮಾಡಿದ್ದರು. ಆದರೆ ನೀರಾವರಿ ಇಲಾಖೆಯವರು ಏಕಾಏಕಿ ಎರಡು ಹಂತಗಳಲ್ಲಿ ನೀರು ಬಂದ್ ಮಾಡಿದ್ದ ಪರಿಣಾಮ ರೈತರ ಬೆಳೆಗಳು ಸಂಪೂರ್ಣ ನಾಶವಾಗಿ ಹೋಗಿದೆ.

ಇದನ್ನು ಓದಿ : ಮೈತ್ರಿಗಾಗಿ ರೈತರ ಜೀವನ ಹಾಳು ಮಾಡುತ್ತಿದ್ದಾರೆ : ಪ್ರತಾಪ್ ಸಿಂಹ

ರಾಜ್ಯ ಸರ್ಕಾರದ ಈ ಹುಚ್ಚಾಟದಿಂದ ರೈತರೆಲ್ಲರೂ ಸಂಕಷ್ಟದಲ್ಲಿ ಸಿಲುಕಿದಂತೆ ಆಗಿದೆ. ಅಷ್ಟೇ ಅಲ್ಲ ಇನ್ನೂ ನಾಳೆಯಿಂದ ಹತ್ತು ದಿನ ನೀರು ಬಂದ್ ಮಾಡಲಿದ್ದಾರೆ. ಈ ವಿಚಾರದಿಂದ ಆಕ್ರೋಶಗೊಂಡ ರೈತರು ಮೊದಲು ನೀರು ಬಿಡುವುದಿಲ್ಲ ಎಂದು ಹೇಳಿದ್ದರೆ ನಾವು ನಾಟಿಯನ್ನೇ ಮಾಡುತ್ತಿರಲಿಲ್ಲ ಎಂದು ದಾವಣಗೆರೆ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ರೈತರ ಆಕ್ರೋಶವನ್ನು ಹೊರಹಾಕಿದ್ದಾರೆ.

ಹಾಗೂ ಈ ರೀತಿಯಲ್ಲಿ ರೈತರಿಗೆ ಮರಣ ಆದೇಶ ಬರೆದಿರುವ ಹಿನ್ನೆಲೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಸಚಿವ ಮಧು ಬಂಗಾರಪ್ಪ ವಿರುದ್ದ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES