ಮೈಸೂರು : 7,000 ರೂಪಾಯಿ ಲಂಚ ಪಡೆದ ಆಹಾರ ಸುರಕ್ಷತಾ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಲೋಕೇಶ್ ಲೋಕಾಯುಕ್ತ ಬಲೆಗೆ ಬಿದ್ದ ಆಹಾರ ಸುರಕ್ಷತಾ ಅಧಿಕಾರಿ. ಮೈಸೂರಿನ ತಿಲಕ್ ನಗರ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಈತ ಸಿಕ್ಕಿಬಿದ್ದಿದ್ದಾನೆ. ಅಂಗಡಿ ಲೈಸೆನ್ಸ್ ರಿನವಲ್ ಮಾಡಿಕೊಡಲು ಲಂಚ ಪಡೆದಿದ್ದಾನೆ.
ನಂಜನಗೂಡಿನ ರಘು ಎಂಬುವವರ ಬಳಿ 7 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗೂಗಲ್ ಪೇ ಮೂಲಕ ರಘು ಬಳಿ 7 ಸಾವಿರ ರೂಪಾಯಿ ವರ್ಗಾವಣೆ ಮಾಡಿಸೊಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಇದೇ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಹಾಗೂ ಡಿವೈಎಸ್ಪಿ ಕೃಷ್ಣಯ್ಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
2ನೇ ಬಾರಿ ಲೋಕಾ ಬಲೆಗೆ
ಕಚೇರಿಯಲ್ಲಿದ್ದಾಗಲೇ ಟ್ರ್ಯಾಪ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಲೋಕೇಶ್ರನ್ನು ವಶಕ್ಕೆ ಪಡೆದಿದ್ದಾರೆ. ಈತನ ಮೇಲೆ ರೇಡ್ ಆಗಿರುವುದು ಇದೇ ಮೊದಲಲ್ಲ. 2015ರಲ್ಲೂ ಲೋಕೇಶ್ ಮೇಲೆ ದಾಳಿ ಮಾಡಲಾಗಿತ್ತು. ಇದೀಗ ಎರಡನೇ ಬಾರಿ ಮತ್ತೆ ಲಂಚ ಪಡೆದು ಲೋಕೇಶ್ ಲೋಕಾ ಅಧಿಕಾರಿಗಳ ಅತಿಥಿಯಾಗಿದ್ದಾನೆ.