Monday, December 23, 2024

ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಪೋಸ್ಟ್ ಮ್ಯಾನ್ ಸಾವು

ವಿಜಯಪುರ : ನಾಟಕ ಪ್ರದರ್ಶನದ ವೇಳೆ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ಹೃದಯಾಘಾತದಿಂದ ಪೋಸ್ಟ್ ಮ್ಯಾನ್ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ.

ಶರಣು ಬಾಗಲಕೋಟೆ (24) ಹೃದಯಾಘಾತದಿಂದ ಸಾವನ್ನಪ್ಪಿರುವ ಪೋಸ್ಟ್ ಮ್ಯಾನ್. ಇವರು ಕುಸಿದು ಬಿಳುವ ವಿಡಿಯೋ ವೈರಲ್ ಆಗಿದೆ.

ಗ್ರಾಮ ದೇವರ ಜಾತ್ರೆ ಹಿನ್ನೆಲೆಯಲ್ಲಿ ‘ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ’ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ ಡ್ಯಾನ್ಸ್ ಮಾಡಲು ಶರಣು ಬಾಗಲಕೋಟ ವೇದಿಕೆ ಏರಿದ್ದರು. ತಾನು ಸಹ ನಾಟಕದಲ್ಲಿ ಹಾಡು ಹಾಡುತ್ತಾ ಡ್ಯಾನ್ಸ್ ಮಾಡಲು ಮುಂದಾದರು. ಈ ವೇಳೆ ದಿಢೀರನೆ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

ಮೃತ ಶರಣು ಅವರು ಇತ್ತೀಚೆಗೆ ಪೋಸ್ಟ್ ಮ್ಯಾನ್ ಆಗಿ ನೇಮಕಗೊಂಡಿದ್ದರು. ಇವರ ಅಗಲಿಕೆಯಿಂದ ಕುಟುಂಬದಲ್ಲಿ ಶೋಕ ಸಾಗರ ಮಡುಗಟ್ಟಿದೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

RELATED ARTICLES

Related Articles

TRENDING ARTICLES