ಚಿಕ್ಕಮಂಗಳೂರು : ವಿದ್ಯುತ್ ಪ್ರವಹಿಸಿ ಎರಡು ಕಾಲು ಸ್ವಾದೀನ ಕಳೆದುಕೊಂಡಿದ್ದ ನವಿಲನ್ನು ರಕ್ಷಿಸಿದ ಉರಗತಜ್ಞರು ಘಟನೆ ಚಾಮಜರಾಜನಗರದ ರಾಮಸಮುದ್ರ ತೋಟದಲ್ಲಿ ನಡೆದಿದೆ.
ರಾಮಸಮುದ್ರದ ಮಹಾದೇವಪ್ಪ ಎಂಬುವರ ತೋಟದಲ್ಲಿ ನವಿಲು ಒಂದು ಓಡಾಡುತ್ತಾ ಇತ್ತು. ಈ ವೇಳೆ ಇಂದು ಆಕಸ್ಮಿಕವಾಗಿ ವಿದ್ಯುತ್ ಶಾಕಕ್ಕೆ ಒಳಗಾಗಿ ಎರಡು ಕಾಲುಗಳ ಸ್ವಾಧೀನವನ್ನು ಕಳೆದುಕೊಂಡು ನೆಲಕ್ಕೆ ಬಿದ್ದು, ಒದ್ದಾಡುತ್ತ ಇತ್ತು.
ಇದನ್ನು ಓದಿ : ಅಪ್ರಾಪ್ತ ಹಿಂದೂ ಹುಡುಗಿಯರ ಕಿಡ್ನಾಪ್ ; ನಾಲ್ವರ ಬಂಧನ
ಈ ವೇಳೆ ಸ್ಥಳೀಯರು ನವಿಲು ಒದ್ದಾಡುತ್ತೀರುವುದನ್ನು ಕಂಡು ಉರಗ ಸ್ನೇಕ್ ಚಾಂಪ್ ಎಂಬುವರಿಗೆ ಮಾಹಿತಿ ತಿಳಿಸಿದ್ದರು. ಬಳಿಕ ಸ್ಥಳಕ್ಕೆ ಬಂದ ಉರಗ ರಕ್ಷಕ ಅರಣ್ಯ ಇಲಾಖೆ ಸಿಬ್ಬಂದಿಗಳ ನೆರವು ಪಡೆದು, ನವಿಲಿಗೆ ಗ್ಲೂಕೋಸ್ ಹಾಗೂ ಇಂಜೆಕ್ಷನ್ ಕೊಟ್ಟು ನಿರಂತರ 3 ತಾಸು ಚಿಕಿತ್ಸೆ ಕೊಟ್ಟು ಆರೈಕೆ ಮಾಡಿದರು.
ಚಿಕಿತ್ಸೆ ಪಡೆದ ನವಿಲು ಚೇತರಿಕೆಯನ್ನು ಕಂಡು ಸ್ನೇಕ್ ಚಾಂಪ್ ನಿಟ್ಟುಸಿರು ಬಿಟ್ಟನು. ರಾಷ್ಟ್ರಪಕ್ಷಿಯನ್ನು ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.